Home » ಅಕ್ರಮ ಚಿನ್ನ ಸಾಗಾಣಿಕೆ : ಈಗ ಇಡಿ ಪ್ರವೇಶ
 

ಅಕ್ರಮ ಚಿನ್ನ ಸಾಗಾಣಿಕೆ : ಈಗ ಇಡಿ ಪ್ರವೇಶ

ಇಡಿ ಬಲೆಗೆ ಗೋಲ್ಡನ್‌ ಲೇಡಿ

by Kundapur Xpress
Spread the love

ಬೆಂಗಳೂರು : ಆಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್‌ಗೆ ಇದೀಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಕರಣ ದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆ‌ರ್ ಐ) ಮತ್ತು ಸಿಬಿಐ ಬಳಿಕ ಇದೀಗ ಜಾರಿ ನಿರ್ಧೇಶನಾಲಯ ( ಇ ಡಿ ) ಎಂಟ್ರಿ ಕೊಟ್ಟಿದೆ

ಅಕ್ರಮ ಹಣ ವರ್ಗಾವಣೆ ಕಾಯ್ದೆ ಪ್ರಕರಣ ದಾಖಲಿಸಿಕೊಂಡ ಇ ಡಿ ಗುರುವಾರ ರನ್ನಾ ರಾವ್ ಮನೆ ಸೇರಿ ಆಕೆ ಮನೆ, ಕಚೇರಿಗಳನ್ನು ಶೋಧ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. ನಾಲ್ಕಕ್ಕೂ ಅಧಿಕ ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ. 

ರನ್ಯಾರಾವ್ ವಾಸಿಸುತ್ತಿದ್ದ ಲ್ಯಾವೆಲ್ಲೆ ರಸ್ತೆಯಲ್ಲಿರುವ ಅಪಾರ್ಟ್‌ ಮೆಂಟ್, ಡಿಆರ್‌ಐ ವಶದಲ್ಲಿರುವ ರನ್ಯಾ ಗೆಳೆಯ ತರುಣ್ ರಾಜ್ ನಿವಾಸ, ಕೋರಮಂಗಲದಲ್ಲಿನ ವೈಟ್ಗೋಲ್ಡ್ ಸಂಸ್ಥೆ ಟಿ.ಜೆ.ರಾವ್ ನಿವಾಸ ಸೇರಿ ಇತರೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

ಈ ವೇಳೆ ರಾವ್ ಅವರ ಮನೆಯಲ್ಲಿ ಭಾರಿ ಪ್ರಮಾಣದ ಚಿನ್ನದ ದಾಸ್ತಾನು ಪತ್ತೆಯಾಗಿದೆ. ಇದರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ಚಿನ್ನ ಎಷ್ಟು ಎಂಬುದರ ಬಗ್ಗೆ ಪರಿಶೀಲನೆ ನಡೆದಿದೆ. ಈ ನಡುವೆ, ರನ್ನಾ ರಾವ್ ವಿಮಾನದ ಟಿಕೆಟ್ ಬುಕ್ ಮಾಡಿದವರು ಮತ್ತು ವಿದೇಶ ಪ್ರವಾಸಕ್ಕೆ ನೆರವು ನೀಡಿದವರು ಮತ್ತು ವ್ಯವಹಾರದಲ್ಲಿ ಪಾಲುದಾರರಾಗಿರುವವರಿಗೂ ಇ.ಡಿ.ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

 

Related Articles

error: Content is protected !!