ಬೆಂಗಳೂರು : ಮದರಸಾದಲ್ಲಿ ಪಠ್ಯ ಬೋಧಿಸುವ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಮದರಸಾ ಮಾಲೀಕನ ಕಿರಿಯ ಪುತ್ರನೊಬ್ಬನನ್ನು ಕೊತ್ತನೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೊತ್ತನೂರಿನ ಮಹಮ್ಮದ್ ಹಸನ್ ಬಂಧಿತ ವ್ಯಕ್ತಿ ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಮದರಸಾದಲ್ಲಿ ಓದುವ ವಿದ್ಯಾರ್ಥಿನಿಯರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ ಹಸನ್ ಅನುಚಿತವಾಗಿ ವರ್ತಿಸಿದ್ದ ಈ ಕೃತ್ಯದ ವಿಡಿಯೋಗಳು ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ
ಕಳೆದ ಮೂರು ವರ್ಷಗಳಿಂದ ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಸನ್ ತಂದೆ ಮದರಸಾ ನಡೆಸುತ್ತಿದ್ದಾರೆ. ಅದರಲ್ಲಿ 200 ಹೆಣ್ಣು ಮಕ್ಕಳು ಇದ್ದಾರೆ. ಅವರ ಹಿರಿಯ ಪುತ್ರನೇ ಪ್ರಾಂಶುಪಾಲನಾಗಿದ್ದಾನೆ. ಈ ಮದರಸಾಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಮಾಲೀಕರ ಕಿರಿಯ ಪುತ್ರ ಹಸನ್ ಬೋಧಿಸುವ ನೆಪದಲ್ಲಿ ಬಾಲಕಿಯರಿಗೆ ಹೊಡೆಯುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ

