Home » ವಿಪರೀತ ಮದ್ಯ ಸೇವನೆ : ಮೃತ್ಯು
 

ವಿಪರೀತ ಮದ್ಯ ಸೇವನೆ : ಮೃತ್ಯು

by Kundapur Xpress
Spread the love

ಕುಂದಾಪುರ : ಕುಂದಾಪುರ ನಗರದ ಮದ್ದುಗುಡ್ಡೆ ನಿವಾಸಿ ನಾಗೇಶ ಮೇಸ್ತ (43) ಎಂಬುವರು ವಿಪರೀತ ಮದ್ಯ ಸೇವನೆಯಿಂದಾಗಿ  ಸರಿಯಾಗಿ ಊಟ ತಿಂಡಿ ಸೇವಿಸದೇ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.

ವಿಪರೀತ ಮದ್ಯ ಸೇವನೆ ಮಾಡುವ ಅಭ್ಯಾಸ ಹೊಂದಿದ್ದ ನಾಗೇಶ್ ಕಳೆದ 3-4 ದಿನಗಳಿಂದ ವಿಪರೀತ ಮದ್ಯಪಾನ ಮಾಡಿ ಮನೆಯಲ್ಲಿಯೇ ಇದ್ದರು. ಭಾನುವಾರ ಮನೆಯಲ್ಲಿ ಮಲಗಿದಲ್ಲಿಯೇ ಅಸ್ವಸ್ಥಗೊಂಡಿದ್ದ ಇವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ನಾಗೇಶ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!