Home » ಕೋಟ ಮಣೂರಿನಲ್ಲಿ ಹೆಜ್ಜೇನು ದಾಳಿ
 

ಕೋಟ ಮಣೂರಿನಲ್ಲಿ ಹೆಜ್ಜೇನು ದಾಳಿ

8 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

by Kundapur Xpress
Spread the love

ಕೋಟ : ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಣೂರಿನಲ್ಲಿ ಹೆಜ್ಜೇನು ದಾಳಿಯಿಂದ ಇಬ್ಬರು ಮಹಿಳೆಯರೂ ಸೇರಿದಂತೆ ಎಂಟು ಮಂದಿಗಾಯಗೊಂಡ ಘಟನೆ  ಸಂಭವಿಸಿದೆ.

ನಾಗಬನದಲ್ಲಿ ಸರ್ಪಸಂಸ್ಕಾರ ಕಾರ್ಯಕ್ರಮ ನಡೆಯುತ್ತಿದ್ದು ಹೋಮಕುಂಡಕ್ಕೆ ಹೊಗೆ ಹಾಕಿದ ಸಂದರ್ಭ ಹೆಜ್ಜೇನುಗಳ ಹಿಂಡೊಂದು ಏಕಾಏಕಿ ದಾಳಿ ನಡೆಸಿದೆ.
ಈ ದಾಳಿಯಿಂದ ಇಬ್ಬರು ಮಹಿಳೆಯರು ಹಾಗೂ ಐವರು ಪುರುಷರು ಗಾಯಗೊಂಡಿರುತ್ತಾರೆ. ರಕ್ಷಣೆಗೆ ಧಾವಿಸಿಬಂದ ಸ್ಥಳೀಯವರಾದ ಸಮಾಜ ಸೇವಕ ವಸಂತ ಸುವರ್ಣ ಅವರಿಗೂ ಹೆಜ್ಜೇನು ದಾಳಿ ಮಾಡಿದೆ. ಗಾಯಾಳುಗಳನ್ನು ತಕ್ಷಣ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು

 

Related Articles

error: Content is protected !!