48
ಹೈದರಾಬಾದ್ : ಕಳ್ಳಭಟ್ಟಿ ಸೇವಿಸಿ 4 ಜನರು ಮೃತಪಟ್ಟು, 44 ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಹೈದ್ರಾಬಾದ್‌ನಲ್ಲಿ ಸಂಭವಿಸಿದೆ. ಜು.5 ಮತ್ತು ಜು.7 ರಂದು ನಗರದ ಕುಕಟ್‌ಪಲ್ಲಿ ಮತ್ತು ಬಾಲಾನಗರ ಸೇರಿ ಹಲವೆಡೆ ಜನರು ಕಳ್ಳಭಟ್ಟಿ ಸೇವಿಸಿದ್ದಾರೆ. ಬಳಿಕ ಜು.8ರಂದು ಅಸ್ವಸ್ಥರಾಗಿ ನಿಜಾಂ ಆಸ್ಪತ್ರೆ ಸೇರಿ ಹಲವೆಡೆ ದಾಖಲಾಗಿದ್ದಾರೆ. ನಾಲ್ವರು ಬಲಿಯಾಗಿದ್ದಾರೆ. 44 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳ್ಳಭಟ್ಟಿ ಅಂಗಡಿಗಳನ್ನು ಅಬಕಾರಿ ಇಲಾಖೆ ಸೀಲ್ ಮಾಡಿದ್ದು, ಐವರನ್ನು ವಶಕ್ಕೆ ಪಡೆದಿದೆ.

