Home » ಗಾಂಜಾ ಮಾರಾಟ ಐದು ವರ್ಷ ಶಿಕ್ಷೆ ಪ್ರಕಟ
 

ಗಾಂಜಾ ಮಾರಾಟ ಐದು ವರ್ಷ ಶಿಕ್ಷೆ ಪ್ರಕಟ

by Kundapur Xpress
Spread the love

ಗಾಂಜಾ ಮಾರಾಟ ಐದು ವರ್ಷ ಶಿಕ್ಷೆ ಪ್ರಕಟ

ಉಡುಪಿ : ಉಡುಪಿಯ ಕಲ್ಪನಾ ಲಾಡ್ಜ್ ಬಳಿ ಅಕ್ರಮವಾಗಿ ಗಾಂಜಾ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿನೋದ್ ರಾಮ್ ಸೇವಕ್ ಎಂಬಾತನಿಗೆ ಐದು ವರ್ಷಗಳ ಕಾಲ  ಕಠಿಣ ಕಾರಾಗೃಹ ಶಿಕ್ಷೆಯನ್ನು ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ಯ ನ್ಯಾಯಾಲಯವು ವಿಧಿಸಿದೆ

ಮುಂಬೈ ಮೂಲದ ಠಾಣೆ ನಿವಾಸಿಯಾದ ವಿನೋದ್ ರಾಮ್ ಎಂಬವನು ಉಡುಪಿ ಪರಿಸರದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದು ಉಡುಪಿಯ ಡಿಸಿಐಬಿ ಘಟಕದ ಪೊಲೀಸರು 10 ಕೆಜಿ 600 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು 13.3.2020 ರಂದು ಸಲ್ಲಿಸಿದ್ದರು  ಪ್ರಕರಣದ ವಿಚಾರಣೆಯನ್ನು ನಡೆಸಿದ ಮಾನ್ಯ ನ್ಯಾಯಾಲಯವು ಆರೋಪಿಗೆ ಐದು ವರ್ಷಗಳ ಕಾಲ ಕಠಿನ ಕಾರಾಗೃಹ ಶಿಕ್ಷೆ ಹಾಗೂ 50,000 ರೂಪಾಯಿ ದಂಡವನ್ನು ವಿಧಿಸಿ ತೀರ್ಪು ಪ್ರಕಟಿಸಿದೆ ಒಂದು ವೇಳೆ 50,000 ದಂಡವನ್ನು ನೀಡಲು ವಿಫಲನಾದರೇ ಮತ್ತೆ ಆರು ತಿಂಗಳ ಕಾಲ ಸಾದಾ ಕಾರಗೃಹ ಶಿಕ್ಷೆ ಅನುಭವಿಸುವಂತೆ ತೀರ್ಪು ಪ್ರಕಟಿಸಿದ್ದಾರೆ  ಈ ಪ್ರಕರಣದಲ್ಲಿ  ಸರಕಾರಿ ಅಭಿಯೋಜಕರಾದ  ಶ್ರೀಮತಿ ಶಾಂತಿಬಾಯಿ ಹಾಗೂ ಜಯರಾಮ್ ಶೆಟ್ಟಿ ಅವರು ವಾದ ಮಂಡಿಸಿದ್ದರು

   

Related Articles

error: Content is protected !!