105
ಪೆನುಕೊಂಡ : ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಕಿಯಾ ಮೋಟರ್ಸ್ ಸ್ಥಾವರದಿಂದ 900 ಎಂಜಿನ್ ಕದ್ದಿದ್ದ 9 ಮಂದಿಯನ್ನು ಬಂಧಿಸಲಾಗಿದೆ. ಕಳೆದು ವರ್ಷದಲ್ಲಿ 900 ಎಂಜಿನ್ ಕದಿಯಲಾಗಿತ್ತು. ಲೆಕ್ಕ ಪರಿಶೋಧನೆ ವೇಳೆ ಇದು ಬೆಳಕಿಗೆ ಬಂದಿದೆ’ ಎಂದು ಕಿಯಾ ಇತ್ತೀಚೆಗೆ ದೂರು ನೀಡಿತ್ತು
ಆಟೋ ಉದ್ಯಮವನ್ನೇ ಈ ಕಳ್ಳತನ ಬೆಚ್ಚಿ ಬೀಳಿಸಿತ್ತು. ಇದರ ಬೆನ್ನಲ್ಲೇ 9 ಜನರನ್ನು ಬಂಧಿಸಿ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ಮಾತನಾಡಿದ ಪೊಲೀಸರು, ‘ಶೇ.10ರಷ್ಟು ತನಿಖೆ ಮಾತ್ರ ಪೂರ್ಣಗೊಂಡಿದೆ. ಕದ್ದ ಎಂಜಿನ್ ಗಳನ್ನು ಆಂಧ್ರದ ಗಡಿ ಮೀರಿ ಹಲವಾರು ರಾಜ್ಯಕ್ಕೆ ಕಳ್ಳಸಾಗಣೆ ಮಾಡಿದ್ದು ಗೊತ್ತಾಗಿದೆ’ ಎಂದಿದ್ದಾರೆ.

