ಕುಂದಾಪುರ : ಕುಂದಾಪುರ ನಗರದ ರಾಷ್ಟ್ರೀಯ ಹೆದ್ದಾರಿ 66 ರ ಹಳೇ ಆದರ್ಶ ಆಸ್ಪತ್ರೆಯ ಎದುರಿನ ಕಡ್ಗಿ ರಸ್ತೆಯ ತುದಿಯ ಖಾಲಿ ಜಾಗದಲ್ಲಿ ನಡೆಯುತ್ತಿದ್ದ ಕೋಳಿಪಡೆಗೆ ಕುಂದಾಪುರ ಪೊಲೀಸರು ನಿನ್ನೆ ಸಂಜೆಯ ವೇಳೆಗೆ ದಾಳಿ ನಡೆಸಿದ್ದಾರೆ
ಪೊಲೀಸರ ದಾಳಿ ವೇಳೆ 15 ರಿಂದ 20 ಜನರಿದ್ದ ಗುಂಪು ದಿಕ್ಕಾಪಾಲಾಗಿ ಓಡಿ ಹೋಗಿದ್ದು ಕೆಲವರು ತೋಡು ಪಾಗಾರವನ್ನು ಹಾರಿ ತಪ್ಪಿಸಿಕೊಂಡರೇ ಇನ್ನು ಕೆಲವರು ಪಕ್ಕದ ಹೊಳೆಗೆ ಹಾರಿ ತಪ್ಪಿಸಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ
ಕುಂದಾಪುರ ಪೊಲೀಸ್ ಉಪ ನಿರೀಕ್ಷಕರಾದ ಪುಷ್ಪರವರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸ್ ತಂಡ ಹಣವನ್ನು ಪಣವಾಗಿರಿಸಿ ಕೋಳಿ ಜುಗಾರಿ ಆಡುತ್ತಿದ್ದ ದಿವಾಕರ, ಅನುಪ್ ಕುಮಾರ್, ಲಾಲು ಪ್ರಸನ್ನ ಎಂಬವರನ್ನು ವಶಕ್ಕೆ ಪಡೆದು ರೂಪಾಯಿ 1,650 ನಗದು ಹಾಗೂ ಹಿಂಸಾತ್ಮಕವಾಗಿ ಜುಗಾರಿ ಆಟಕ್ಕೆ ಬಳಸಿದ 3 ಹುಂಜಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 75/2024 ಕಲಂ: 87, 93 KP Act ಮತ್ತು 11(1)(a) ಪ್ರಾಣಿ ಹಿಂಸೆ ತಡೆ ಕಾಯಿದೆ ಅನ್ವಯ ಪ್ರಕರಣ ದಾಖಲಾಗಿದೆ