ಕುಂದಾಪುರ : ಕುಂದಾಪುರ ನಗರದಲ್ಲಿನ ಕೋ-ಅಪರೇಟಿವ್ ಸೊಸೈಟಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿ ಐ ಡಿ ತಂಡ ಕುಂದಾಪುರಕ್ಕೆ ಆಗಮಿಸಿ ಸೊಸೈಟಿಯ ಲೆಕ್ಕ ಪರಿಶೋಧನೆ ಕಾರ್ಯ ನಡೆಸಿತು
ಕುಂದಾಪುರ ನಗರದ ಶ್ರೀ ವೆಂಕಟರಮಣ ಆರ್ಕೇಡ್ ನಲ್ಲಿ ಕಾರ್ಯಾಚರಿಸುತ್ತಿದ್ದ ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯು ಹಲವಾರು ಗ್ರಾಹಕರಿಗೆ ಹಲವು ಕೋಟಿಗೂ ಮಿಕ್ಕಿ ವಂಚನೆ ನಡೆಸಿದ ಬಗ್ಗೆ ಠೇವಣಿದಾರರು ದೂರು ದಾಖಲಿಸಿದ್ದರು
ಈ ಬಗ್ಗೆ ತನಿಖೆಗಾಗಿ ಬೆಂಗಳೂರಿನ ಸಿ ಐ ಡಿ ತಂಡ ಸೊಸೈಟಿಯ ಬಾಗಿಲು ತೆರೆದು ವಾರ್ಷೀಕ ಆಡಿಟಿಂಗ್ ಲೆಕ್ಕ ಪರಿಶೀಲನೆ ಹಾಗೂ ಕಂಪೂಟರ್ ಪರಿಶೀಲನೆ ನಡೆಸಿ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿಗಳಾದ ಶಿವಾನಂದರವರ ವಿಚಾರಣೆ ನಡೆಸಿತು ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಹಕಾರಿ ನಿಬಂಧಕರು ಉಪಸ್ಥಿತರಿದ್ದರು
ಸೊಸೈಟಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಸೇರಿದಂತೆ ಸೊಸೈಟಿಯ ನಿರ್ಧೇಶಕರು ಅಧಿಕಾರ ದುರುಪಯೋಗ ಪಡಿಸಿಕೊಂಡು ಒಳಸಂಚು ರೂಪಿಸಿ ಠೇವಣಿದಾರರಿಗೆ ಹಣವನ್ನು ವಾಪಾಸ್ಸು ನೀಡದೇ ನಂಬಿಕೆ ದ್ರೋಹ ಮತ್ತು ಮೋಸ ಮಾಡಿದ ಬಗ್ಗೆ ದೂರು ದಾಖಲಾಗಿತ್ತು
ಮುಂಜಾಗ್ರತ ಕ್ರಮವಾಗಿ ಕುಂದಾಪುರ ಠಾಣಾಧಿಕಾರಿಗಳಾದ ನಂಜಾ ನಾಯಕ್ ನೇತೃತ್ವದಲ್ಲಿ ಪೊಲೀಸ್ ಸುಪರ್ದಿಯನ್ನು ಹಾಕಲಾಗಿತ್ತು

