ಮಂಗಳೂರು : ನಾಲ್ಕು ವರ್ಷದ ಹಿಂದೆ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ
ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್.ವಿ ರವರು ರಮೇಶ್ ಶೆಟ್ಟಿಗಾರ್ ಹಾಗೂ ನಿತ್ಯಾನಂದ ಎಂಬವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ಪ್ರಕಟಿಸಿದ್ದಾರೆ
ಮಂಗಳೂರು ತಾಲೂಕಿನ ಬಡಗ ಎಡಪದವು ನಿವಾಸಿ ರಮೇಶ್ ಶೆಟ್ಟಿಗಾರ್ ಮತ್ತು ನಿತ್ಯಾನಂದ ಶಿಕ್ಷೆಗೊಳಗಾದ ಆರೋಪಿಗಳು ಬಡಗ ಎಡಪದವು ಗ್ರಾಮದ ದೂಮ ಚಡವು ದಡ್ಡಿ ಕ್ರಾಸ್ ಎಂಬಲ್ಲಿ ನವೀನ ಎಂಬುವರ ತಲೆಗೆ ದೊಣೆಯಿಂದ ಹೊಡೆದು ಕೊಲೆ ಮಾಡಿದ್ದರು ಎನ್ನಲಾಗಿದ್ದು ಬಳಿಕ ತಮ್ಮ ಬಟ್ಟೆ ಬರೆಗಳನ್ನು ಕಾಡಿನಲ್ಲಿ ಸುಟ್ಟು ಸಾಕ್ಷಿ ನಾಶ ಮಾಡಿದ್ದರು ಈ ಬಗ್ಗೆ ಪೊಲೀಸರು ಪ್ರಕರಣವನ್ನು ದಾಖಲಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು