235
ಮದ್ಯ ಮಾರಾಟ ಪ್ರಕರಣ ದಾಖಲು
ಉಡುಪಿ:ಪರವಾನಗಿ ಪಡೆಯದೇ ಹೊಟೇಲ್ ವೊಂದರಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಹೊಟೇಲ್ ಮಾಲಕರ ವಿರುದ್ದ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಆದಿ ಉಡುಪಿಯ ಫಿಶ್ ಲ್ಯಾಂಡ್ ಹೊಟೇಲ್ ನಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ನಗರ ಠಾಣೆಯ ಉಪ ನಿರೀಕ್ಷಕರಾದ ಮಹೇಶ್ ಟಿ ಎಂ ರವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ ಮದ್ಯ ಸೇವಿಸುತ್ತದ್ದ ಗ್ರಾಹಕರು ಓಡಿ ಹೋಗಿದ್ದು 6,660 ಲೀ.ನ 11 ಮದ್ಯದ ಬಾಟಲ್ ಹಾಗೂ 510 ರೂ. ನಗದನ್ನು ವಶಪಡಿಸಿಕೊಂಡು ಹೊಟೇಲ್ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

