Home » ಹಣಕ್ಕಾಗಿ 25 ಮದುವೆ ಆದ ವಂಚಕಿಯ ಬಂಧನ
 

ಹಣಕ್ಕಾಗಿ 25 ಮದುವೆ ಆದ ವಂಚಕಿಯ ಬಂಧನ

ಅವಳದೇ ತಂತ್ರ ಬಳಸಿ ವಂಚಕಿಯ ಸೆರೆ

by Kundapur Xpress
Spread the love

ಜೈಪುರ : ಮದುವೆ ಹೆಸರಿನಲ್ಲಿ ಕೇವಲ 7 ತಿಂಗಳಲ್ಲಿ 25 ವರರಿಗೆ ವಂಚಿಸಿ ಅವರ ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದ ಖತರ್ನಾಕ್ ವಧುವನ್ನು ಮಧ್ಯಪ್ರದೇಶದ ಸವಾಯಿ ಮಾಧೋಪುರ ಪೊಲೀಸರು ಬಂಧಿಸಿದ್ದಾರೆ. ‘ಲೂಟಿಕೋರ ವಧು’ ಎಂದೇ ಕುಖ್ಯಾತಿ ಪಡೆದಿರುವ ಅನುರಾಧಾ ಪಾಸ್ವಾನ್ ಬಂಧಿತೆ.

32 ವರ್ಷದ ಈಕೆ ಕಡು ಬಡವಳು. ಮದುವೆಯಾಗುವ ಇಚ್ಛೆಯಿದ್ದರೂ ಬಡತನದ ಕಾರಣದಿಂದ ಮದುವೆ ಯಾಗಲು ಸಾಧ್ಯವಾಗುತ್ತಿಲ್ಲ ಎಂದು ನಂಬಿಸಿ ಅಮಾಯಕ ಯುವಕರಿಗೆ ಬಲೆ ಬೀಸುತ್ತಿದ್ದಳು. ಈಕೆಯ ಗ್ಯಾಂಗ್‌ನ ಸದಸ್ಯರು ವಿವಾಹಾಕಾಂಕ್ಷಿ ಯುವಕರನ್ನು ಹುಡುಕಿ ಈಕೆಯ ಫೋಟೊ ತೋರಿಸಿ ಮದುವೆ ಮಾತುಕತೆ ನಡೆಸುತ್ತಿದ್ದರು. ಸಂಬಂಧ ಕುದುರಿಸಲು 2 ಲಕ್ಷರು. ಪಡೆಯುತಿದ್ದರು. ಮದುವೆ ಒಪ್ಪಂದದ ಬಳಿಕ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಮದುವೆ ಯಾಗುತ್ತಿತ್ತು. ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ಎಲ್ಲರೊಟ್ಟಿಗೂ ಅನ್ಯೂನ್ಯವಾಗಿರುವಂತೆ ನಟಿಸುತ್ತಿದ್ದಳು. ಮುಗ್ಧಳಂತೆ ವರ್ತಿಸಿ ಎಲ್ಲರನ್ನೂ ಮರಳು ಮಾಡುತ್ತಿದ್ದಳು.

ಮದುವೆಯಾದ ಕೆಲವೇ ದಿನಗಳಲ್ಲಿ ಆಹಾರದಲ್ಲಿ ಮತ್ತು ಬರುವ ಪದಾರ್ಥ ಬೆರೆಸಿ ಪತಿಯ ಕುಟುಂಬದವರಿಗೆ ಕೊಡುತ್ತಿದ್ದಳು. ನಂತರ ಮನೆಯಲ್ಲಿ ನಗದು, ಚಿನ್ನಾಭರಣವನ್ನು ದೋಚಿ ಪರಾರಿಯಾಗುತ್ತಿದ್ದಳು. ಈ ರೀತಿ ಬರೋಬ್ಬರಿ 25 ವರರಿಗೆ ವಂಚಿಸಿದ್ದು ಬೆಳಕಿಗೆ ಬಂದಿದೆ

ಪೊಲೀಸರ ವಿಶಿಷ್ಟ ಬಲೆಗೆ ಸಿಕ್ಕಿಬಿದ್ದ ವಂಚಕಿ :

ದೂರಿನ ಬಳಿಕ ಪೊಲೀಸರು ಅವಳದೇ ಶೈಲಿಯಲ್ಲಿ ಬಲೆ ಬೀಸಿದ್ದಾರೆ. ಪೊಲೀಸ್ ಕಾನ್ ಸ್ಟೇಬಲ್ ಒಬ್ಬರನ್ನು ವರನ ರೀತಿಯಲ್ಲಿ ಬಿಂಬಿಸಿ, ಆಕೆಯನ್ನು ಸಂಪರ್ಕಿಸಿದ್ದಾರೆ. ಕೊನೆಗೆ ಆಕೆಯನ್ನು ಭೋಪಾಲ್‌ನಲ್ಲಿ ಬಂಧಿಸಿದ್ದಾರೆ.

 

Related Articles

error: Content is protected !!