ಮಂಗಳೂರು : ರಾಜ್ಯ ಪೊಲೀಸ್ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದ ಮಾದಕ ವಸ್ತು ಎಂಡಿಎಂಎ ವಶಪಡಿಸಿಕೊಂಡ ಮಂಗಳೂರು ನಗರ ಪೊಲೀಸ್ ಇಲಾಖೆ ಈ ಕುರಿತು ನಾರ್ಕೋಟಿಕ್ ಕ್ರೈಮ್ ಬ್ಯುರೊ (ಎನ್‌ಸಿಬಿ)ಗೆ ಮಾಹಿತಿ ನೀಡಿದ್ದು ಎನ್‌ಸಿಬಿ ಅಧಿಕಾರಿಗಳು ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಲಿದ್ದಾರೆ.
ವಾರದೊಳಗೆ ಎನ್‌ಸಿಬಿ ಅಧಿಕಾರಿಗಳು ಮಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ ಪ್ರಕರಣ ಬೆಳಕಿಗೆ ಬಂದ ಬಳಿಕ ರಾಷ್ಟ್ರಾದ್ಯಂತ ಸಂಚಲನ ಸೃಷ್ಟಿಯಾಗಿದ್ದು ಮಂಗಳೂರು ಸಿಸಿಬಿ ತಂಡ ಮುಂದಿನ ತನಿಖೆ ಆರಂಭಿಸಿದೆ.
ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಬರೋಬ್ಬರಿ 75 ಕೋಟಿ ರು. ಮೌಲ್ಯದ 37.870 ಕೆ.ಜಿ ಎಂಡಿಎಂಎ ಸಾಗಾಟ ಮಾಡುತ್ತಿದ್ದ ದಕ್ಷಿಣ ಆಫ್ರಿಕಾ ಮೂಲದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದರು. ಇಷ್ಟು ದೊಡ್ಡ ಪ್ರಮಾಣದ ಅಪಾಯಕಾರಿ ಡ್ರಗ್ಸ್ ಎಲ್ಲಿಂದ ಸರಬರಾಜು ಆಗುತ್ತಿದೆ ಎಂಬುದು ಇದುವರೆಗೆ ಬೆಳಕಿಗೆ ಬಂದಿಲ್ಲ. ಅಲ್ಲದೆ ಇದರಲ್ಲಿ ವಿದೇಶಿಗರ ಕೈವಾಡ ಅಡಗಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ಮುಂದುವರಿದಿದೆ. ದೆಹಲಿಯಲ್ಲಿ ಮಂಗಳೂರು ಪೊಲೀಸರ ಒಂದು ತಂಡ ಬೀಡುಬಿಟ್ಟಿದೆ.
7 ದಿನ ಪೊಲೀಸ್ ಕಸ್ಟಡಿ :
ಬಂಧಿತ ಆರೋಪಿಗಳಾದ ಬಂಬಾ ಫಾಂಟಾ ಹಾಗೂ ಅಜಿಗೈಲ್ ಅಡೋನಿಸ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ? ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

