ಕುಂದಾಪುರ : ಕುಂದಾಪುರ ನಗರದ ವಡೇರಹೋಬಳಿ ಜೆಎಲ್‌ಬಿ ರಸ್ತೆಯ ನಿವಾಸಿ ವಿವಾಹಿತೆ ಹೀನಾ ಕೌಸರ್ (32 ವರ್ಷ) ನಾಪತ್ತೆಯಾದ ಬಗ್ಜೂಗೆ ದೂರು ದಾಖಲಾಗಿದೆ
ಜೂನ್ 8 ರಂದು ಬೆಳಗ್ಗೆ ಮನೆಯಿಂದ ಹೊರ ಹೋದವಳು ಈವರೆಗೆ ಮನೆಗೆ ಬಾರದೆ ಸಂಭಂಧಿಕರ ಮನೆಗೂ ತೆರಳದೇ ಕಾಣೆಯಾಗಿದ್ದಾಳೆ ಎಂದು ತಾಯಿ ಸಾಧಿಕಾ ಭಾನು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ನಗರದಿಂದ ಕೋಡಿಗೆ ಹೋಗುವ ಸೇತುವೆ ಬಳಿಯಲ್ಲಿ ಹೀನಾಕೌಸರ್ ಅವರ ಸ್ಕೂಟರ್ ಮತ್ತು ಚಪ್ಪಲಿ ಪತ್ತೆಯಾಗಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಹುಡುಕಾಟ ಆರಂಭಿಸಿದ್ದಾರೆ.
ಸ್ಕೂಟರ್ ನಿಲ್ಲಿಸಿ ನದಿಗೆ ಜಿಗಿದಿರುವ ಶಂಕೆಯ ಹಿನ್ನೆಲೆಯಲ್ಲಿ ಇಡೀ ದಿನ ಕಾರ್ಯಾಚರಣೆ ನಡೆಸಲಾಗಿದ್ದು, ಯಾವುದೇ ಸುಳಿವು ಸಿಕ್ಕಿರುವುದಿಲ್ಲ ಮೂಲತಃ ಉಡುಪಿಯವರಾಗಿರುವ ಅವರು ಮದುವೆಯಾಗಿ ಕುಂದಾಪುರ ವಿಠಲವಾಡಿ ಜೆಎಲ್‌ಬಿ ರಸ್ತೆಯಲ್ಲಿರುವ ಗಂಡನ ಮನೆಯಲ್ಲಿ ನೆಲೆಸಿದ್ದು ಇಬ್ಬರು ಮಕ್ಕಳಿದ್ದಾರೆ. ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

