ಕುಂದಾಪುರ : 14 ದಿನಗಳ ಹಿಂದೆ ನಾಪತ್ತೆಯಾಗಿದ್ದ ಕುಂದಾಪುರ ನಗರದ ವಿಠಲವಾಡಿ ನಿವಾಸಿ ಹೀನಾ ಕೌಸರ್ ಮರಳಿ ಮನೆಗೆ ಬಂದಿದ್ದಾರೆ. ಜೂ.10 ರಂದು ಕೋಡಿ ಸೇತುವೆಯಲ್ಲಿ ಅವರ ಸ್ಕೂಟರ್, ಚಪ್ಪಲಿ ಪತ್ತೆಯಾಗಿತ್ತು. ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದರು.
ನದಿಗೆ ಜಿಗಿದಿರಬಹುದು ಎಂಬ ಹಿನ್ನೆಲೆಯಲ್ಲಿ ಹೀನಾ ಕೆಸರ್ ಹುಡುಕಾಟ ನಡೆದಿತ್ತು. ಆದರೆ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ ಅವರು ಮನೆಗೆ ವಾಪಸಾಗಿದ್ದು ಮನೆಯವರು ನಿರಾಳರಾಗಿದ್ದಾರೆ.
ಸುಸೈಡ್ ಡ್ರಾಮ :
ಬೆಳ್ಳಂಬೆಳ್ಳಗೆ ಕೋಡಿ ಸೇತುವೆ ಬಳಿ ಸ್ಕೂಟಿಯಲ್ಲಿ ಡೆತ್ ನೋಟ್ ಇರಿಸಿ ನಾಪತ್ತೆಯಾಗಿದ್ದ ಅವರು, ತಮ್ಮ ಕಥೆಯನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾರೆ.
ಅಬಿದಾ ಎಂಬಾಕೆಯ ಟಾರ್ಚ‌್ರನಿಂದ ಡಿಪ್ರೆಶನ್‌ಗೆ ಒಳಗಾಗಿದ್ದೆ. ಹಾಗಾಗಿ ಆತ್ಮಹತ್ಯೆ ಮಾಡಲು ಬೆಳ್ಳಂಬೆಳ್ಳಗ್ಗೆ ಕೋಡಿ ಸೇತುವೆ ಬಳಿ ಹೋದೆ. ಅಲ್ಲಿ ನದಿಗೆ ಜಿಗಿಯಲು ಹೊರಟಾಗ ಮೀನುಗಾರರಿದ್ದ ಕಾರಣ ಮನಸ್ಸು ಬದಲಿಸಿ ಮಂಗಳೂರಿಗೆ ಹೋದೆ. ಅಲ್ಲಿಂದ ಉಳ್ಳಾಲ ದರ್ಗಾ ಸೇರಿಕೊಂಡೆ ಎಂದಿದ್ದಾರೆ.

ನಿಮ್ಮ ನಾಪತ್ತೆ ಬೆನ್ನಲ್ಲೇ ಸಾಹಿಲ್ ಎಂಬಾತ ಕಾಣೆಯಾಗಿದ್ದ ಏನಾದರೂ ಲಿಂಕ್ ಇದೆಯಾ ಎಂಬ ಪ್ರಶ್ನೆಗೆ, ನನಗೂ ಅದಕ್ಕೂ ಸಂಬಂಧವಿಲ್ಲ, ಅವನೆಲ್ಲಿದ್ದಾನೆ ಅಂತಾ ನಂಗೇನು ಗೊತ್ತು ಎಂದು ಮರುಪ್ರಶ್ನೆ ಹಾಕಿದ್ದಾರೆ.
ಸಾಹಿಲ್ ಕೂಡ ಪ್ರತ್ಯಕ್ಷ :
ಹೀನಾ ಕೌಸರ್ ಬೆನ್ನಿಗೆ ನಾಪತ್ತೆಯಾಗಿದ್ದ ಸಾಹಿಲ್ ಕೂಡ ಮನೆಗೆ ವಾಪಸಾಗಿದ್ದಾರೆ ಎಂದು ತಿಳಿದು ಬಂದಿದೆ

