ಬೆಂಗಳೂರು : ನಿವೃತ್ತ ಡಿಜಿಪಿ ಓಂಪ್ರಕಾಶ್ ಭೀಕರ ಕೊಲೆ ವೇಳೆ ಮನೆಯ ಎರಡನೇ ಮಹಡಿಯಲ್ಲಿ ಸೊಸೆ ಮತ್ತು ಮೊಮ್ಮಗ ಸಹ ಇದ್ದರು. ಆದರೆ, ಪೊಲೀಸರು ಮನೆಗೆ ಬಂದು ಬಾಗಿಲು ತೆರೆಸುವವರೆಗೂ ಸೊಸೆ-ಮೊಮ್ಮಗನಿಗೆ ಓಂ ಪ್ರಕಾಶ್ ಕೊಲೆಯಾಗಿರುವ ವಿಚಾರ ಗೊತ್ತಿರಲಿಲ್ಲ ಎಂದು ತಿಳಿದು ಬಂದಿದೆ.
ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಓಂಪ್ರಕಾಶ್ ಅವರ ಮೂರು ಅಂತಸ್ತಿನ ಮನೆಯಿದೆ. ನೆಲಮ ಹಡಿಯಲ್ಲಿ ಓಂ ಪ್ರಕಾಶ್ ಮತ್ತು ಪತ್ನಿ ಪಲ್ಲವಿ, ಎರಡನೇ ಮಹಡಿಯಲ್ಲಿ ಪುತ್ರ ಕಾರ್ತಿಕೇಶ್ ದಂಪತಿ ಹಾಗೂ ಮೂರನೇ ಮಹಡಿಯಲ್ಲಿ ಪುತ್ರಿ ಕೃತಿ ವಾಸವಿದ್ದರು. ಕೌಟುಂಬಿಕ ಕಲಹದ ಕಾರಣಕ್ಕೆ ತಾಯಿ-ಮಗಳು ಕಾರ್ತಿಕೇಶ್ ದಂಪತಿ ಜತೆಗೆ ಅಂತರ ಕಾಯ್ದುಕೊಂಡಿದ್ದರು.
ಭಾನುವಾರ ಮಧ್ಯಾಹ್ನ ಓಂ ಪ್ರಕಾಶ್ ಡೈನಿಂಗ್ ಹಾಲ್‌ನಲ್ಲಿ ಕುಳಿತು ಮೀನೂಟ ಮಾಡುತ್ತಿದ್ದರು. ಈ ವೇಳೆ ದಂಪತಿ ನಡುವೆ ಜಗಳ ಶುರುವಾಗಿದೆ. ಆಗ ಪತ್ನಿ ಪಲ್ಲವಿ ಏಕಾಏಕಿ ಚಾಕು ತೆಗೆದು ಮೀನೂಟ ಮಾಡುತ್ತಿದ್ದ ಓಂ ಪ್ರಕಾಶ್ ಅವರ ಕುತ್ತಿಗೆಗೆ ಇರಿದಿದ್ದಾರೆ. ಬಳಿಕ ಮುಖದ ಮೇಲೆ ಕಾರದಪುಡಿ ಎರಚಿದ್ದಾರೆ.
ತಲೆ ಮೇಲೆ ಅಡುಗೆ ಎಣ್ಣೆ ಸುರಿದಿದ್ದಾರೆ. ಈ ಹಂತದಲ್ಲಿಓಂಪ್ರಕಾಶ್‌ಗೆ ಪ್ರತಿರೋಧವೊಡ್ಡಲು ಪಲ್ಲವಿ ಅವಕಾಶ ನೀಡಿಲ್ಲ ಬಳಿಕ ಸಿಕ್ಕ ಸಿಕ್ಕ ವಸ್ತುಗಳಿಂದ ಓಂಪ್ರಕಾಶ್ ಮೇಲೆ ಪಲ್ಲವಿ ಹಲ್ಲೆ ಮಾಡಿದ್ದಾರೆ. ಚಾಕುವಿನಿಂದ ತಲೆ, ಕುತ್ತಿಗೆ, ಮುಖಕ್ಕೆ ಮನ ಬಂದಂತೆ ಇರಿದಿದ್ದಾರೆ. ಬಳಿಕ ಸ್ನೇಹಿತೆಗೆ ವಿಡಿಯೋ ಕರೆ ಮಾಡಿರುವ ಪಲ್ಲವಿ ‘ಐ ಹ್ಯಾವ್ ಕಿಲ್ಲಡ್ ಮಾನಸ್ಪರ್’ ಎಂದು ತೋರಿಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ

