329
ಉಡುಪಿ : ಉಡುಪಿ ಜಿಲ್ಲೆಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೂರಿ ಸಹಿತ ಇನ್ನಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಈ ಮಧ್ಯೆ ಆರೋಪಿ ಪ್ರವೀಣ್ ಚೌಗುಲೆ ಘಟನೆಗೆ ಸಂಬಂಧಿಸಿದಂತೆ ಗೊಂದಲದ ಹೇಳಿಕೆ ನೀಡಿದ್ದು ವಿಚಾರಣೆ ಸಂಬಂಧ ಕೃತ್ಯಕ್ಕೆ ಬಳಸಲಾದ ಚೂರಿಯನ್ನು ಉಡುಪಿ ಮಂಗಳೂರು ನಡುವಿನ ನದಿಗೆ ಎಸೆದಿದ್ದಾನೆ ಎಂದಿದ್ದರೆ ಇನ್ನೊಮ್ಮೆ ಮಂಗಳೂರಿನ ಫ್ಲಾಟ್‌ನಲ್ಲಿ ಇಟ್ಟಿದ್ದೇನೆ ಎಂದಿದ್ದ ಇದೀಗ ಆತನನ್ನು ಮಂಗಳೂರಿನ ಫ್ಲಾಟ್ ಗೆ ಕರೆದೊಯ್ದ ಪೊಲೀಸರು ಚೂರಿ ಮಾಸ್ಕ್ ರಕ್ತಸಿಕ್ತ ಬಟ್ಟೆ ಹಾಗೂ ಹೆಜಮಾಡಿಯವರೆಗೆ ಬಂದಿದ್ದ ಸ್ವಂತ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

