ಕುಂದಾಪುರ : ಕೊಡ್ಲಾಡಿ ಗ್ರಾಮದ ಕೊಳಲಿಯಲ್ಲಿ ಬೈಕಿನಲ್ಲಿ ಜಿಂಕೆ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿ ಕೊಡ್ಲಾಡಿ ಗ್ರಾಮದ ಜಗದೀಶ ಮೇಸ್ತನನ್ನು ಅರಣ್ಯ ಇಲಾಖೆ ಬಂಧಿಸಿದ್ದು ಇಬ್ಬರು ಪರಾರಿಯಾಗಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನವೆಂಬರ್ 8ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತನಿಂದ 23 ಕೆಜಿ ಜಿಂಕೆ ಮಾಂಸ, ಬೈಕ್, ಚೂರಿ, ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಡಿಎಫ್ಒ ಗಣಪತಿ, ಎಸಿಎಫ್ ಪ್ರಕಾಶ್ ಪೂಜಾರಿ ಮಾರ್ಗ ದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ಉಪ ವಲಯ ಅರಣ್ಯಾಧಿಕಾರಿಗಳಾದ ನಿಂಗಪ್ಪ ಗುರುರಾಜ, ಸುನಿಲ್, ಶರತ್, ವಿನಯ್, ಅರಣ್ಯ ರಕ್ಷಕರಾದ ಗಂಗಾಧರ, ಅಶೋಕ, ಸುನಿಲ್, ತಿಮ್ಮಪ್ಪ ಭಾಗವಹಿಸಿದ್ದಾರೆ