Home » ಸುಡುಮಣ್ಣಿಗೆ ಹಾಕಿದ್ದ ಬೆಂಕಿ ಆವರಿಸಿ ಸಜೀವ ದಹನ
 

ಸುಡುಮಣ್ಣಿಗೆ ಹಾಕಿದ್ದ ಬೆಂಕಿ ಆವರಿಸಿ ಸಜೀವ ದಹನ

by Kundapur Xpress
Spread the love

ಕುಂದಾಪುರ : ಗದ್ದೆಯಲ್ಲಿ ಕೃಷಿ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ನಂದಿಸಲು ಹೋದ ರೈತನೋರ್ವ ಅದೇ ಬೆಂಕಿಗೆ ಬಿದ್ದು ಸಜೀವ ದಹನಗೊಂಡ ಹೃದಯವಿದ್ರಾವಕ ಘಟನೆ ಕುಂದಾಪುರದ ಕಾಳಾವರದ ಬಡಾಗುಡ್ಡೆ ಎಂಬಲ್ಲಿ ನಡೆದಿದೆ. ಕಾಳಾವರ ನಿವಾಸಿ ಮಹಾಲಿಂಗ ದೇವಾಡಿಗ (80) ಮೃತ ದುರ್ದೈವಿಯಾಗಿದ್ದಾರೆ.

ಕೃಷಿಕರಾಗಿರುವ ಇವರು ತಮ್ಮ ಮಗಳೊಂದಿಗೆ ಕಸಕ್ಕೆ ಬೆಂಕಿ ಹಾಕಿದ್ದರು. ಅದರ ಕೆನ್ನಾಲಿಗೆ ಸುತ್ತಲೂ ಆವರಿಸಿತ್ತು. ಹತ್ತಿರದ ನಾಗಬನಕ್ಕೂ ಬೆಂಕಿ ಹಬ್ಬುವ ಸಾಧ್ಯತೆ ಇತ್ತು ಈ ವೇಳೆ ಅದನ್ನು ನಂದಿಸಲು ಹೋದ ಮಹಾಲಿಂಗ ದೇವಾಡಿಗ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟಿದ್ದಾರೆ  ಅಗ್ನಿಶಾಮಕ ದಳದ ಪೊಲೀಸರು ಆಗಮಿಸಿದ್ದರೂ ಯಾವುದೇ ಪ್ರಯೊಜನವಾಗಲಿಲ್ಲ   ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!