69
ಹೈದರಾಬಾದ್ : ಹೈದರಾಬಾದ್ ನಗರದಲ್ಲಿ ಬಾಂಬ್ ದಾಳಿ ನಡೆಸಬೇಕೆಂದು ಸಂಚು ರೂಪಿಸಿದ್ದ ಇಬ್ಬರು ಭಯೋತ್ಪಾದಕರನ್ನು ಆಂಧ್ರ ಪ್ರದೇಶ ಮತ್ತು ತೆಲಂಗಾಣ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.
ನಗರದಲ್ಲಿ ಬಾಂಬ್ ಸ್ಫೋಟಗೊಳಿಸುವ ಸಂಚು ರೂಪಿಸಿದ್ದ ಸಿರಾಜ್ ಉರ್ ರೆಹಮಾನ್ (29) ಮತ್ತು ಸೈಯದ್ ಸಮೀರ್ (28) ಅನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಸ್ಫೋಟಕಗಳ ತಯಾರಿಕೆಗೆ ಬಳಸುವ ಅಮೋನಿಯಾ, ಸಲ್ಕರ್, ಅಲ್ಯೂಮಿನಿಯಂ ಪೌಡರ್ ಪ್ಯಾಕೆಟ್‌ಗಳ ಸಹಿತ ರಾಸಾಯನಿಕ ವಸ್ತುಗಳನ್ನು ಪೊಲೀಸರು ವಶಪಡಿಸಿದ್ದಾರೆ. ವಿಜಯನಗರಂ ನಿವಾಸಿ ಸಿರಾಜ್ ಮತ್ತು ಸೈಯದ್ ಹೈದರಾಬಾದ್‌ನವನೇ ಎಂದು ಪೊಲೀಸರು ಗುರುತಿಸಿದ್ದಾರೆ.

