116
ಸಾಸ್ತಾನ : ಖಾಸಗಿ ಕ್ಲಿನಿಕ್‌ಗೆ ಬಂದ ಯುವತಿಗೆ ಲೈಂಗಿಕ ಕಿರುಕುಳ ಆರೋಪ, ಕೋಟ ಠಾಣೆಯಲ್ಲಿ ಪ್ರಕರಣ ದಾಖಲು
ಕೋಟ: ಇಲ್ಲಿನ ಸಾಸ್ತಾನದ ಖಾಸಗಿ ಕ್ಲಿನಿಕ್ ಗೆ ಅನಾರೋಗ್ಯದ ಕಾರಣದಿಂದಾಗಿ ಕ್ಲಿನಿಕ್ ಗೆ ಬಂದ ಯುವತಿಯೊಡನೆ ವೈದ್ಯರೊರ್ವ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದೆ.
ಸಾಸ್ತಾನದ ಸ್ಥಳೀಯ ಗುಂಡ್ಮಿ ನಿವಾಸಿ, ಸದ್ಯ ಮುಂಬೈಯಲ್ಲಿ ವಾಸವಿರುವ ಸುಮಾರು 21ವರ್ಷ ಪ್ರಾಯದ ಯುವತಿಯೊಬ್ಬಳು ಅನಾರೋಗ್ಯದ ಕಾರಣಕ್ಕೆ ತಪಾಸಣೆಗೆಂದು ಸಾಸ್ತಾನದಲ್ಲಿರುವ ಉಪಾಧ್ಯಾಯ ಕ್ಲಿನಿಕ್ ಗೆ ಹೋಗಿದ್ದಾರೆ. ಆಗ ಅಲ್ಲಿನ ವೈದ್ಯರಾದ ರಾಘವೇಂದ್ರ ಉಪಾಧ್ಯಾಯ ಯುವತಿಯೊಡನೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಯುವತಿ ಮನೆಗೆ ಹೋಗಿ ವಿಷಯ ತಿಳಿಸಿದ್ದು, ಸ್ಥಳೀಯರೆಲ್ಲ ಸೇರಿ ಸಂಜೆ ವೈದ್ಯರ ಬರುವ ವೇಳೆಗೆ ಕಾದು ಡಾ. ರಾಘವೇಂದ್ರ ಉಪಾಧ್ಯಾಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ
ನಂತರ ಕೋಟ ಪೊಲೀಸರು ಸ್ಥಳಕ್ಕಾಗಮಿಸಿ, ಆರೋಪಿಯನ್ನುಬಂಧಿಸಿದ್ದಾರೆ. ಆರೋಪಿಯ ಮೇಲೆ ಎಫ್ ಐ ಆರ್ ದಾಖಲಾಗಿದೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

