Home » ಅಕ್ರಮ ಕಲ್ಲುಕೋರೆ : ಪೊಲೀಸರ ದಾಳಿ
 

ಅಕ್ರಮ ಕಲ್ಲುಕೋರೆ : ಪೊಲೀಸರ ದಾಳಿ

by Kundapur Xpress
Spread the love

ಕುಂದಾಪುರ :  ಆಲೂರು ಗ್ರಾಮದ ವಿವೇಕಾನಂದ ಕಾಲೋನಿ ಬಳಿ ಕಲ್ಲುಕೋರೆಗೆ ಗಂಗೊಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ. ಆಲೂರು ಗ್ರಾಮದ ಬೀಟ್ ಪೊಲೀಸ್ ಸಿಬ್ಬಂದಿ ನಿತಿನ್ ಎಂಬುವರು ನೀಡಿದ ಖಚಿತ ಮಾಹಿತಿ ಮೇರೆಗೆ ವಿವೇಕಾನಂದ ಕಾಲನಿ ಬಳಿ ಯಾವುದೇ ಅನುಮತಿ ಇಲ್ಲದೇ ಕೆಂಪು ಕಲ್ಲು ಕೋರೆಯ ಕಲ್ಲುಗಳನ್ನು ತೆಗೆದು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.

ಪ್ರಥ್ವಿರಾಜ್ ಎಂಬುವರು ಅನಧಿಕೃತವಾಗಿ ನಡೆಸುತ್ತಿದ್ದ ಕಲ್ಲು ಕೋರೆಯಲ್ಲಿ ಸುಮಾರು 100 ಕೆಂಪು ಕಲ್ಲುಗಳು ಕಂಡು ಬಂದಿದ್ದು, ಕಲ್ಲು ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಮೂರು ಜನ ಓಡಿ ಪರಾರಿಯಾಗಿದ್ದಾರೆ. ಕಲ್ಲು ಕೋರೆಯಲ್ಲಿದ್ದ ಕಲ್ಲುಗಳನ್ನು ಕಟ್ಟಿಂಗ್ ಮಾಡುವ ಮಿಷನ್, ಕಲ್ಲುಗಳನ್ನು ಕತ್ತರಿಸುವ ಟಿಲ್ಲರ್, ಹಾರೆ, ಪಿಕ್ಕಾಸು ಹಾಗೂ ಜೆಸಿಬಿಯನ್ನು ವಶಪಡಿಸಿ ಕೊಳ್ಳಲಾಗಿದ್ದು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

error: Content is protected !!