113
ಹಾವೇರಿ : ಗ್ಯಾಂಗ್ ರೇಪ್ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ಏಳು ಆರೋಪಿಗಳು ತಮ್ಮ ಬೆಂಬಲಿಗರೊಂದಿಗೆ ಸೇರಿ ರೋಡ್ ಶೋ ನಡೆಸಿ ಸಂಭ್ರಮಿಸಿರುವ ಘಟನೆ ರಾಜ್ಯವನ್ನು ಬೆಚ್ಚಿಬೀಳಿಸಿದೆ.
ಹಾಡು ಹಾಕಿಕೊಂಡು ಬೈಕ್, ಕಾರುಗಳಲ್ಲಿ ಹಾವೇರಿಯಿಂದ ಹಾನಗಲ್ ತಾಲೂಕಿನ ಅಕ್ಷ ಆಲೂರಿನವರೆಗೆ ಮೆರವಣಿಗೆ ನಡೆಸಿ, ಬಳಿಕ ಹುಟ್ಟೂರಿನಲ್ಲಿ ಆರೋಪಿಗಳು ಸಂಭ್ರಮಾಚರಣೆ ಮಾಡಿದ್ದಾರೆ
ಕಾರಿನ ಸನ್‌ರೂಫ್‌ನಲ್ಲಿ ನಿಂತು ಜನರತ್ತ ಕೈಬೀಸಿದ್ದಾರೆ. ಅವರಿಗೆ ಹಲವು ಬೈಕ್ ಗಳು ಬೆಂಗಾವಲಾಗಿ ಸಾಗಿವೆ. ಇದರ ವಿಡಿಯೋ ದೇಶಾದ್ಯಂತ ವೈರಲ್ ಆಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಏಳೂ ಮಂದಿಯ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ. ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

