65
ಹೊಸದಿಲ್ಲಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಅವರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜು.24ಕ್ಕೆ ಮುಂದೂಡಿದೆ. ನಟ ದರ್ಶನ್‌ಗೆ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿದ್ದ ಸುಪ್ರೀಂ ಕೋರ್ಟ್ ಈ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿತ್ತು.
ಹಿರಿಯ ವಕೀಲ ಕಪಿಲ್ ಸಿಬಲ್ ಇನ್ನೊಂದು ವಿಚಾರಣೆಗೆ ಹಾಜರಾಗಲೇ ಬೇಕಾಗಿದ್ದರಿಂದ ದರ್ಶನ್ ಪರ ವಾದಿಸಲು ಗೈರಾಗಿದ್ದಾರೆ. ಸೋಮವಾರ ರಾತ್ರಿಯಷ್ಟೇ ಪ್ರಕರಣ ತಮಗೆ ಸಿಕ್ಕಿದ್ದರಿಂದ ತಯಾರಿ ಮಾಡಿ ವಾದ ಮಂಡಿಸಲು ಒಂದು ದಿನ ಕಾಲಾವಕಾಶ ಬೇಕು ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದೀವಾಲಾ ಮತ್ತು ಆರ್.ಮಹಾದೇವನ್‌ರನ್ನು ಒಳಗೊಂಡ ನ್ಯಾಯಪೀಠಕ್ಕೆ ಸಿದ್ಧಾರ್ಥ್ ದಾವೆ ಮನವಿ ಮಾಡಿದ್ದಾರೆ. ದರ್ಶನ್ ಪರ ವಕೀಲ ದಾವೆ ಮನವಿ ಕೇಳಿದ ನ್ಯಾಯಾಲಯ ವಿಚಾರಣೆ ಮುಂದೂಡಿದೆ.

