210
ಹಣ ವಂಚನೆ : ಪ್ರಕರಣ ದಾಖಲು
ಕುಂದಾಪುರ : ಸಾರ್ವಜನಿಕರು ಠೇವಣಿ ಇಡಲು ನೀಡಿದ ಹಣವನ್ನು ಖಾತೆದಾರರ ಖಾತೆಗೆ ಜಮಾ ಮಾಡದೇ ಸ್ವಂತಕ್ಕೆ ಉಪಯೋಗಿಸಿ ವಂಚಿಸಿದ್ದಾರೆ ಎಂದು ಅಂಚೆಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಕಲಾವತಿ ಎಂಬವರ ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಲಾವತಿಯವರು ಹಲವರಿಂದ 60 ಸಾವಿರ 50 ಸಾವಿರ 40 ಸಾವಿರ 20 ಸಾವಿರ ಒಟ್ಟು 1,70,000 ರೂಪಾಯಿಯನ್ನು ವಂಚಿಸಿ ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ

