ಉಡುಪಿ : ಮಲ್ಪೆ ಬಳಿಯ ಪಡುತೋನ್ಸೆ ಗ್ರಾಮದ ಹೂಡೆ ಗುಡೇರಿ ಕಂಬ್ಬದಲ್ಲಿ ಅಕ್ರಮವಾಗಿ ಮರಳು ಶೇಖರಣೆ ಮಾಡುತ್ತಿದ್ದ ಮೂವರನ್ನು ಮಲ್ಪೆ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಹಿಡಿದು ವಶಕ್ಕೆ ಪಡೆದುಕೊಂಡಿದ್ದಾರೆ.
ನುಲ್ಲಾ ಮುನೀರ್, ಫಜೂಲ್ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಅವರು ಸುವರ್ಣ ನದಿ ತೀರದಲ್ಲಿ ಮರಳನ್ನು ತೆಗೆದು ಸುಲೇಮಾನ್ ಅವರಿಗೆ ಸೇರಿದ ಜಾಗದಲ್ಲಿ ಶೇಖರಣೆ ಮಾಡಿದ್ದಾರೆ. ಸುಮಾರು 10 ಸಾವಿರ ಮೌಲ್ಯದ 2 ಯೂನಿಟ್ ಮರಳನ್ನು ಸಂಗ್ರಹಿಸಿದ್ದು, ಅದನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ