Home » ಕುಂದಾಪುರ : ಮರಳು ಟಿಪ್ಪರ್‌ ವಶ
 

ಕುಂದಾಪುರ : ಮರಳು ಟಿಪ್ಪರ್‌ ವಶ

by Kundapur Xpress
Spread the love

ಕುಂದಾಪುರ : ಕುಂದಾಪುರ ಗ್ರಾಮಾಂತರ ಪಿಎಸ್‌ಐ ಭೀಮಾಶಂಕರ ಸಿನ್ನೂರ ಸಿಂಗಣ್ಣ ಮತ್ತು ಸಿಬ್ಬಂದಿಯವರು ಖಚಿತ ಮಾಹಿತಿ ಮೇರೆಗೆ ಹಳ್ಳಾಡು ಕಡೆಯಿಂದ ಮರಳು ಕಳವು ಮಾಡಿ ಅಕ್ರಮವಾಗಿ ಸಾಗಿಸಲಾಗುತ್ತಿರುವ  ಟಿಪ್ಪರ್‌ನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರನ್ನು ಕಂಡು ಟಿಪ್ಪರ್ ನಿಲ್ಲಿಸದ ಚಾಲಕ ಟಿಪ್ಪರನ್ನು ಅತೀ ವೇಗದಿಂದ ಚಲಾಯಿಸಿಕೊಂಡು ಹೋಗಿದ್ದು ಪೊಲೀಸರು ಬೆನ್ನಟ್ಟಿದಾಗ ವಾಲ್ಲೂರು ಸಮೀಪ ಟಿಪ್ಪರ್ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ. ಟಿಪ್ಪರ್ ಪರಿಶೀಲಿಸಿದಾಗ ಎರಡುವರೆ ಯೂನಿಟ್ ಮರಳು ಪತ್ತೆಯಾಗಿದೆ.   ಪ್ರಕರಣ ದಾಖಲಾಗಿದೆ.

 

Related Articles

error: Content is protected !!