ಕಾರ್ಕಳ : ಹೆಬ್ರಿ ಬಸ್ಸು ನಿಲ್ದಾಣದಲ್ಲಿ ನಡೆದ ಪ್ರಮೋದ್ ಮುತಾಲಿಕರ ಚುನಾವಣಾ ಪ್ರಚಾರ ಭಾಷಣದಲ್ಲಿ,” ಕಬ್ಬಿನಾಲೆ ಭಾಗದ ಎಸ್ ಸಿ ಎಸ್ ಟಿ ಜನಾಂಗದವರು ಕಾಡು ಜನರು. ಪೂರ್ತಿಯಾಗಿ ಹಾಕಿಕೊಳ್ಳಲಿಕ್ಕೆ ಬಟ್ಟೆ ಇಲ್ಲ. . ಎಂದು ದಲಿತ ಸಮಾಜವನ್ನು ಅವಹೇಳನಕಾರಿಯಾಗಿ ದೂಷಿಸಿ ಮಾತನಾಡಿರುತ್ತಾರೆ ಪರಿಶಿಷ್ಟ ಜಾತಿ ಪಂಗಡ ದೌರ್ಜನ್ಯ ಪ್ರತಿರೋಧ ಕಾಯ್ದೆಯನ್ವಯ, ದಲಿತ ಜನಾಂಗದವರಿಗೆ ಅವಹೇಳನಕಾರಿಯಾಗಿ ಮಾತನಾಡಿದ ಶ್ರೀ ಪ್ರಮೋದ್ ಮುತಾಲಿಕ್ ಮತ್ತು ಕಾರ್ಯಕ್ರಮವನ್ನು ಆಯೋಜಿಸಿದ ಹರೀಶ್ ಅಧಿಕಾರಿ ,ವಿವೇಕಾನಂದ ಶೆಣೈ,ದಿವ್ಯ ನಾಯಕ್, ಪ್ರವೀಣ ಕಾಂತರಗೋಳಿ ಮತ್ತು ಸುಭಾಷ್ ಚಂದ್ರ ಹೆಗ್ಡೆಯವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ, ಮಲೆಕುಡಿಯ ಜನಾಂಗದ ನಿಯೋಗ ಹೆಬ್ರಿ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದೆ