ಕುಂದಾಪುರ : ಬಸ್ರೂರು ಸಮೀಪದ ಕಂಡ್ಲೂರು ಸೇತುವೆ ಮೇಲಿನಿಂದ ನದಿಗೆ ಜಿಗಿದ ಛಾಯಾಗ್ರಾಹಕ ಕಣ್ಮರೆಯಾಗಿರುವ ಘಟನೆ ನಿನ್ನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಕಾಳಾವರ ಗ್ರಾಮದ ನಿವಾಸಿ ಛಾಯಾಗ್ರಾಹಕ, ಆರ್ಟಿಸ್ಟ್ ಹರೀಶ್ ಕಾಳಾವರ (45ವರ್ಷ) ನದಿಗೆ ಜಿಗಿದವರು. ಮಧ್ಯಾಹ್ನ 1.00 ಗಂಟೆ ಸುಮಾರಿಗೆ ಆಟೋ ರಿಕ್ಷಾದಲ್ಲಿ ಆಗಮಿಸಿದ್ದ ಅವರು ಸೇತುವೆ ಸಮೀಪ ಇಳಿದು ಸೇತುವೆ ಮೇಲಿನಿಂದ ನದಿಗೆ ಏಕಾಏಕಿ ಜಿಗಿದಿದ್ದಾರೆ. ಮಳೆಯ ಅಬ್ಬರಕ್ಕೆ ನದಿಯ ಹರಿವು ತೀವ್ರತೆ ಹೊಂದಿದ್ದರಿಂದ ಅವರು ನೀರು ಪಾಲಾಗಿದ್ದು ನಾಪತ್ತೆಯಾಗಿದ್ದಾರೆ ಅವರಿಗಾಗಿ ಪೊಲೀಸರು, ಅಗ್ನಿಶಾಮಕ ಠಾಣೆ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ