110
ಮಂಗಳೂರು : ಕಳೆದ ವಾರವಷ್ಟೇ ಅಪ್ರಾಪ್ತ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮೂಡುಬಿದಿರೆಯ ವಿಚಾರಣಾಧೀನ ಕೈದಿ ಪ್ರಕಾಶ್ (43) ಎಂಬಾತ ಮಂಗಳೂರು ಕೇಂದ್ರ ಕಾರಾಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಪಕ್ಕದ ಮನೆಯ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಲಾಡಿ ಅಜಂಕಲ್ಲು ನಿವಾಸಿ ಪ್ರಕಾಶ್‌ನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಜೈಲಿನಲ್ಲಿದ್ದ ಪ್ರಕಾಶ್ ಭಾನುವಾರ ನಸುಕಿನ ಜಾವ 4.05ರಿಂದ 4.55ರ ನಡುವೆ ನೇಣಿಗೆ ಶರಣಾಗಿದ್ದಾನೆ. ಜೈಲಿನ ಸೆಲ್ ನಂ.2 ಬ್ಯಾರಕ್ ಬಿ ಶೌಚಾಲಯದಲ್ಲಿರುವ ಗ್ರಿಲ್‌ಗೆ ಕಟ್ಟಿದ ಟವೆಲ್ ಬಳಸಿ ಕುತ್ತಿಗೆಗೆ ಬಿಗಿದುಕೊಂಡಿದ್ದಾನೆ. ಇದನ್ನು ಕರ್ತವ್ಯ ನಿರತ ಕಾರಾಗೃಹ ಸಿಬ್ಬಂದಿ ಗಮನಿಸಿ ಕೂಡಲೇ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

