Home » 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಗ್ರ ಸಿದ್ದಿಕಿ ಸೆರೆ
 

29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಗ್ರ ಸಿದ್ದಿಕಿ ಸೆರೆ

1998ರ ಕೊಯಮತ್ತೂರು ಸ್ಪೋಟದ ಆರೋಪಿ

by Kundapur Xpress
Spread the love

ವಿಜಯಪುರ : ಕಳೆದ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ತಮಿಳುನಾಡಿನ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯನ್ನು ತಮಿಳುನಾಡು ಪೊಲೀಸರು ನಗರದಲ್ಲಿ ಬಂಧಿಸಿದ್ದಾರೆ. ಗುಂಡ್ಲುಪೇಟೆ ನಿವಾಸಿ ಸಿದ್ದಿಕಿ ರಾಜಾ ಉರ್ಫ್ ಟೈಲರ್ ರಾಜಾ ಉರ್ಫ್ ಶಹಜಹಾನ್ (50) ಬಂಧಿತ ಆರೋಪಿ

1998ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಬಾಂಬ್ ಸ್ಫೋಟ ಸೇರಿದಂತೆ ವಿವಿಧ ಭಯೋತ್ಪಾದನಾ ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿರುವ ಮುಖ್ಯ ಆರೋಪಿ ಸಿದ್ದಿಕಿ ರಾಜಾನನ್ನು ತಮಿಳುನಾಡು ಪೊಲೀಸ್, ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಗುಪ್ತಚರ ಇಲಾಖೆ ನೆರವಿನಿಂದ ಬಂಧಿಸಲಾಗಿದೆ

 

Related Articles

error: Content is protected !!