293
ಬೈಂದೂರು : ಹಾಡ ಹಗಲೇ ಮನೆಗೆ ನುಗ್ಗಿ ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಬೈಂದೂರು ಸಮೀಪದ ಶಿರೂರಿನಲ್ಲಿ ನಿನ್ನೆ ಸೋಮವಾರ ಮಧ್ಯಾಹ್ನ ನಡೆದಿದೆ
ಶಿರೂರಿನ ಮಾರ್ಕೆಟ್ ಬಳಿ ನಿವಾಸಿಗಳಾದ ರಾಕೇಶ್ ಪಟಗಾರ್ ದಂಪತಿ ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಮಧ್ಯಾಹ್ನ ಊಟ ಮುಗಿಸಿ ಕಾಲೇಜಿಗೆ ಮರಳಿದ ಸಮಯವನ್ನು ನೋಡಿ ಮನೆಯ ಹಿಂಭಾಗಿಲಿನಿಂದ ನುಗ್ಗಿದ ಕಳ್ಳರು 32 ಗ್ರಾಂ ಮೌಲ್ಯದ ಮಾಂಗಲ್ಯ ಸರ 10 ಗ್ರಾಂ ತೂಕದ ಕಿವಿಯೋಲೆ 100 ಗ್ರಾಂ ಬೆಳ್ಳಿ ಹಾಗೂ ಒಂದು ಸಾವಿರ ರೂಪಾಯಿ ನಗದನ್ನು ಕಳವು ಮಾಡಿದ್ದಾರೆ
ನಂತರ ಪಕ್ಕದ ಮನೆಗೂ ಹೋಗಿ ಹಿಂಬಾಗಿಲನ್ನು ಒಡೆಯುತ್ತಿರುವುದನ್ನು ನೋಡಿದ ಮನೆಯವರು ಕೂಗಿದ ಬಳಿಕ ಕಳ್ಳರು ಪರಾರಿಯಾಗಿದ್ದಾರೆ ಬೈಂದೂರು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ

