139
ಬೈಂದೂರು : ಸಮೀಪದ ಉಪ್ಪುಂದ ಸಕ್ರೆಬೆಟ್ಟು ಎಂಬಲ್ಲಿನ ನಿವಾಸಿಯಾದ ಜನಾರ್ದನ್ ಅವರ ಮನೆಯಲ್ಲಿ ಲ್ಯಾಪ್‌ಟಾಪ್ ಸಹಿತ ಬೆಳ್ಳಿ ಸೊತ್ತು ಕಳವಾಗಿದೆ.
ಮನೆಯವರು ಸೋಮವಾರ ರಾತ್ರಿ ಮನೆ ಸಮೀಪದಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟ ನೋಡಲು ಮನೆಗೆ ಬೀಗ ಹಾಕಿ ಹೋಗಿದ್ದು, ತಡರಾತ್ರಿ 1.15ಕ್ಕೆ ಬಂದು ನೋಡುವಾಗ ಮನೆ ಎದುರಿನ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಒಳಗಡೆ ಹೋಗಿ ಪರಿಶೀಲಿಸಿದಾಗ ಕಪಾಟಿನಲ್ಲಿರಿಸಿದ್ದ ಡೆಲ್ ಕಂಪನಿ ಲ್ಯಾಪ್‌ಟಾಟ್ ಸಹಿತ ಒಟ್ಟು 46,000 ರೂ. ಮೌಲ್ಯದ ಸೊತ್ತು ಕಳವಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

