240
ಕುಂದಾಪುರ : ಗುಲ್ವಾಡಿ ಗ್ರಾಮದ ಮನೆಯೊಂದರಲ್ಲಿ ಚಿನ್ನಾಭರಣ ಕಳವಾದ ಬಗ್ಗೆ ಪ್ರಕರಣ ದಾಖಲಾಗಿದೆ ಸಿದ್ದಾಪುರದ ಕಡ್ರಿ ನಿವಾಸಿ ಮರಿಯಮ್ ಶಹರೀನ್ ಅವರು ಆ.22 ರಂದು ತಾಲೂಕಿನ ಗುಲ್ವಾಡಿ ಗ್ರಾಮದ ಶೆಟ್ರಕಟ್ಟೆ ಕಲ್ಕಂಬ ಎಂಬಲ್ಲಿರುವ ಮಾವ ಮಹಮ್ಮದ್ ಖಾಸಿಂ ಅವರ ಮನೆಯ ಗೃಹಪ್ರವೇಶ ಹಾಗೂ ಮದುವೆ ಕಾರ್ಯಕ್ರಮದ ಕುಟುಂಬ ಸಮೇತರಾಗಿ ಅಲ್ಲಿಯೇ ಬಂದು ಉಳಿದುಕೊಂಡಿದ್ದರು. ಆ.26ರಂದು ಕಾರ್ಯಕ್ರಮ ಮುಗಿಸಿ ಸಂಜೆ 6.00 ಗಂಟೆಗೆ ತಾನು ಧರಿಸಿದ್ದ ಮೂರು ಚಿನ್ನದ ಬಳೆ, ಇತರೆ ಚಿನ್ನಾಭರಣಗಳನ್ನು ಸೂಟ್‌ಕೇಸ್‌ನಲ್ಲಿ ಇರಿಸಿದ್ದರು. ಆ.27 ರಂದು ಸಂಜೆ ಸೂಟ್‌ಕೇಸ್ ತೆರೆದು ನೋಡುವಾಗ ಅದರಲ್ಲಿ ಇರಿಸಿದ್ದ 23 ಗ್ರಾಂ ತೂಕದ ಅಂದಾಜು ತಲಾ 1.10ಲಕ್ಷ ರೂ. ಮೌಲ್ಯದ 2 ಚಿನ್ನದ ಬಳೆ, 54 ಗ್ರಾಂ ತೂಕದ 2.60 ಲಕ್ಷ ಮೌಲ್ಯದ ಚಿನ್ನದ ಬಳೆ ಕಾಣದಾಗಿದ್ದು ಯಾರೊ ಕಳವು ಮಾಡಿದ್ದಾರೆ ಎಂದು ಅವರು ದೂರು ನೀಡಿದ್ದಾರೆ. ಕಳವಾದ ಮೂರು ಬಳೆಗಳ ಒಟ್ಟು ಮೌಲ್ಯ 4.80ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

