Home » ಕರ್ನಾಟಕ ಬ್ಯಾಂಕ್‌ ಕಳ್ಳತನಕ್ಕೆ ಯತ್ನ
 

ಕರ್ನಾಟಕ ಬ್ಯಾಂಕ್‌ ಕಳ್ಳತನಕ್ಕೆ ಯತ್ನ

by Kundapur Xpress
Spread the love

ಕುಂದಾಪುರ : ಸಮೀಪದ ಕೋಣಿ ಗ್ರಾಮದಲ್ಲಿರುವ ಕರ್ನಾಟಕ ಬ್ಯಾಂಕ್‌ ಶಾಖೆಗೆ ಇಬ್ಬರು ಒಳ ಪ್ರವೇಶಿಸಿ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ

ಇಂದು ದಿನಾಂಕ: 16/10/2024 ರಂದು ಮಧ್ಯರಾತ್ರಿ 12.00 ಗಂಟೆಯಿಂದ 02.45 ಗಂಟೆಯ ಮಧ್ಯದಲ್ಲಿ ಯಾರೋ ಇಬ್ಬರು ಕಳ್ಳರು ಕೋಣಿ ಗ್ರಾಮದ ಕರ್ನಾಟಕ ಬ್ಯಾಂಕ ಶಾಖೆಯ ಶೇಟರ್‌ ಬಾಗಿಲಿಗೆ ಅಳವಡಿಸಿದ ಕೀ ಯನ್ನು ಮುರಿದು ಬ್ಯಾಂಕಿನ ಒಳಗೆ ಪ್ರವೇಶಿಸಿ ಕಳ್ಳತನಕ್ಕೆ ಪ್ರಯತ್ನಿಸಿದ್ದು ಹಾಗೂ ಬ್ಯಾಂಕಿನ ಕಟ್ಟಡದಲ್ಲಿರುವ ಕರ್ನಾಟಕ ಬ್ಯಾಂಕಿನ ATM ಕೊಠಡಿಯ ಶೇಟರ್‌ ಗೆ ಅಳವಡಿಸಿದ ಬೀಗವನ್ನು ಜಖಂಗೊಳಿಸಿ ಒಳಪ್ರವೇಶಿಸಿ ಕಳ್ಳತನಕ್ಕೆ ಪ್ರಯತ್ನಿಸಿದ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

   

Related Articles

error: Content is protected !!