Home » ಮರಳು ಅಕ್ರಮ ಸಾಗಾಟ : ಟಿಪ್ಪರ್ ವಶ
 

ಮರಳು ಅಕ್ರಮ ಸಾಗಾಟ : ಟಿಪ್ಪರ್ ವಶ

by Kundapur Xpress
Spread the love

ಕಾರ್ಕಳ : ಕಾರ್ಕಳ ನಗರದ  ಸರ್ವಜ್ಞ ವೃತ್ತದ ಬಳಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಟಿಪ್ಪರ್ ಲಾರಿ ಚಾಲಕ ಮಂಜುನಾಥ, ಮಾಲೀಕ ವಿರಾಜ್ ಹಾಗೂ ಗುರುಪುರದ ಶ್ರೀಕರ ಎಂಬವರು ಯಾವುದೇ ಪರವಾನಗಿ ಇಲ್ಲದೆ ಮಂಗಳೂರಿನ ಗುರುಪುರ ಹೊಳೆಯಿಂದ ಅಕ್ರಮವಾಗಿ 2 ಯುನಿಟ್ ಮರಳು ಕಳವು ಮಾಡಿ ಸಾಗಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ನಗರ ಠಾಣೆ ಪೊಲೀಸರು ಮರಳು ಸಹಿತ ಲಾರಿಯನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

 

Related Articles

error: Content is protected !!