ಕುಂದಾಪುರ. ಗ್ರಾಮೀಣ ಪ್ರದೇಶದ ಸುಸ್ಥಿರ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಕುಂದಾಪುರ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ದಿ ಕನ್ಸನ್ರ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ನಮ್ಮ ಭೂಮಿ ಸಂಸ್ಥೆಯವರು ಒಡಂಬಡಿಕೆ ಮಾಡಿಕೊಂಡರು.
ಪಂಚಾಯತ್ ಮಟ್ಟದಲ್ಲಿ ಮಕ್ಕಳು ಸಂಘ ಮಾಡಿಕೊಂಡಿದ್ದಾರೆ. ಆ ಮಕ್ಕಳಿಗೆ ಊರೊಂದು ಶಾಲೆಯಡಿ ಶಿಕ್ಷಣ ದೊರಕುವಂತೆ ಮಾಡುವುದು. ಮಕ್ಕಳ ಪ್ರತಿಭೆÀ, ಕೌಶಲ್ಯ ಗುರುತಿಸುವುದು, ಮಕ್ಕಳ ಕಲಿಕೆ ಗುರುತಿಸುವುದು, ಆಟದೊಂದಿಗೆ ಪಾಠ ಮತ್ತು ಮೌಲ್ಯಯುತ ಶಿಕ್ಷಣ ನೀಡುವುದು. ಮಕ್ಕಳ ಸಮಸ್ಯೆಗಳನ್ನು ಆಲಿಸಿ ಅವರ ಹಕ್ಕು ದೊರೆಯುವಂತೆ ಮಾಡುವುದು ಈ ಒಡಂಬಡಿಕೆಯ ಮಹತ್ವದ ಭಾಗ ಎಂದು ಸಿ.ಡಬ್ಲ್ಯೂ.ಸಿ ನಮ್ಮ ಭೂಮಿ ಸಂಸ್ಥೆಯ ಸಂಯೋಜಕ ಶ್ರೀನಿವಾಸ ಗಾಣಿಗ ಹೇಳಿದರು.
ಶಿಕ್ಷಣ, ಆರೋಗ್ಯ, ರಕ್ಷಣೆ, ಜೀವನೋಪಾಯ ಸುಧಾರಿಸಲು ಈ ಒಡಂಬಡಿಕೆ ಮಹತ್ವದ್ದಾಗಿದೆ. ಪ್ರಮುಖವಾಗಿ ಮಕ್ಕಳ ಸಂರಕ್ಷಣೆಯ ಹಕ್ಕು, ಅಭಿಪ್ರಾಯವನ್ನು ತಿಳಿಸುವ ಹಕ್ಕು, ಸದಾವಕಾಶ ಪಡೆಯುವ ಹಕ್ಕು, ಬಾಲ್ಯವಸ್ಥೆಯನ್ನು ಆನಂದಿಸುವ ಹಕ್ಕು, ಸ್ವಚ್ಛÀ್ಚ ಹಾಗೂ ಶಾಂತಿಯುತ ಪ್ರಪಂಚದ ಹಕ್ಕು ಕಲ್ಪಿಸುವುದು. ಸ್ಥಳೀಯ ಸರಕಾರ, ಸಮುದಾಯ ಹಾಗೂ ಮಕ್ಕಳು ಮತ್ತು ಜನರ ನಡುವಿನ ಮಾಹಿತಿ ಹಂಚಿಕೆಯು ಪ್ರಮುಖ ಗುರಿಯಾಗಿದೆ. ಹಾಗೆಯೇ ಸಾಮಾನ್ಯ ಗ್ರಾಮ ಸಭೆ, ಮಕ್ಕಳ ಗ್ರಾಮ ಸಭೆ, ಮಹಿಳಾ ಗ್ರಾಮ ಸಭೆ, ಎಸ್.ಟಿ.ಎಸ್.ಸಿ ಗ್ರಾಮ ಸಭೆಯ ಮಹತ್ವ ತಿಳಿಸುವುದು ಸಹ ಈ ಒಡಂಬಡಿಕೆಯ ಉದ್ದೇಶ ಎಂದು ಸಿ.ಡಬ್ಲ್ಯೂಸಿ ನಮ್ಮ ಭೂಮಿ ಸಂಸ್ಥೆಯ ಸಂಯೋಜಕ ಕೃಪಾ ಎಂ. ತಿಳಿಸಿದರು.
ಈ ಸಂದರ್ಭ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಚೇತನ್ ಶೆಟ್ಟಿ ಕೋವಾಡಿ, ಸಹ ಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ, ಸಿ.ಡಬ್ಲ್ಯೂ.ಸಿ ನಮ್ಮ ಭೂಮಿ ಸಂಸ್ಥೆಯ ಪಂಚಾಯತ್ ಮಟ್ಟದ ಸಂಯೋಜಕರಾದ ಗಣೇಶ ಶೆಟ್ಟಿ ಶಾನ್ಕಟ್, ಶ್ರೇಯಸ್, ಅನಿತಾ, ನರಸಿಂಹ ಗಾಣಿಗ, ಆಶಾ ಉಪಸ್ಥಿತರಿದ್ದರು.