ತೆಕ್ಕಟ್ಟೆ : ಸೇವಾ ಸಂಗಮ ವಿದ್ಯಾಕೇಂದ್ರ ವಿದ್ಯಾಗಿರಿ, ತೆಕ್ಕಟ್ಟೆ ಮತ್ತು ಮಾತೃ ಭಾರತಿಯ ಸಹಯೋಗದಲ್ಲಿ, ವಿದ್ಯಾ ಭಾರತಿ ಉಡುಪಿ ಜಿಲ್ಲೆ, ಕರ್ನಾಟಕ ಆಯೋಜನೆಯಲ್ಲಿ ” ಸಪ್ತ ಶಕ್ತಿ ಸಂಗಮ -2026″ ಈ ಕಾರ್ಯಕ್ರಮವನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸುರೇಶ್ ಬೆಟ್ಟಿನ್ ಉದ್ಘಾಟಿಸಿ, ಮಹಿಳೆಯರಲ್ಲಿ ಅಡಗಿರುವ ಸಪ್ತ ಶಕ್ತಿಗಳ ಅರಿವು, ಅವರ ಆತ್ಮವಿಶ್ವಾಸ ಸಾಮರ್ಥ್ಯ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಸಂಕಲ್ಪದೊಂದಿಗೆ, ಎಲ್ಲಾ ಮಹಿಳೆಯರಿಗೆ ಸಶಕ್ತ, ಸಫಲ ಮತ್ತು ಸಂತೃಪ್ತ ಜೀವನಕ್ಕಾಗಿ ಶುಭ ಹಾರೈಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು , ಶಾಲಾ ಮಾತೃಭಾರತಿಯ ಅಧ್ಯಕ್ಷರಾದ ಶ್ರೀಮತಿ ಶ್ರುತಿ ಉಡುಪ ವಹಿಸಿ, ಮಹಿಳೆಯರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವ ಸುಂದರ ವೇದಿಕೆ ಹಾಗೂ ನಾವು ನಮ್ಮ ಮಾತೃಭಾರತೀಯ ಮೂಲಕ ಸಂಪನ್ಮೂಲ ವ್ಯಕ್ತಿಗಳಾಗಿ ರೂಪುಗೊಳ್ಳಲು ವಿದ್ಯಾ ಭಾರತಿಯ ಸಪ್ತ ಶಕ್ತಿ ಸಂಗಮ ಕಾರ್ಯಕ್ರಮ ಸಹಾಯಕವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಪೂರ್ಣಿಮಾ ಭಟ್ ಸಾಹಿತಿಗಳು ಕಮಲಶಿಲೆ, ಶ್ರೀಮತಿ ಶೈಲಜಾ ಮಾತಾಜಿ ವಿಶ್ವಂಬರ ಶಿಶುಮಂದಿರ ಪಟ್ಲ, ಶ್ರೀಮತಿ ಇಂದ್ರಾಕ್ಷಿ ಉಡುಪ, ನಿವೃತ್ತ ಮುಖ್ಯೋಪಾಧ್ಯಾಯರು ಸೇವಾ ಸಂಗಮ ವಿದ್ಯಾಕೇಂದ್ರ ತೆಕ್ಕಟ್ಟೆ, ಶ್ರೀಮತಿ ಸ್ವರ್ಣ ಆಪ್ತ ಸಮಾಲೋಚಕರು ಕುಂದಾಪುರ, ಮಂಗಳೂರು ವಿಭಾಗ, ಶ್ರೀಮತಿ ಸಾವಿತ್ರಿ ಐತಾಳ್ ಮಾತೃಭಾರತಿ, ಮುಖ್ಯ ಅತಿಥಿಗಳಾಗಿ ಶ್ರೀ ಕಮಲಾಕ್ಷ ಪೈ ಸಂಚಾಲಕರು , ಶ್ರೀ ಹರ್ಷ ಕೋಟೇಶ್ವರ ಮುಖ್ಯೋಪಾಧ್ಯಾಯರು ಹಾಗೂ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಮಾತೆಯರು, ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದು, ಶ್ರೀಮತಿ ಜ್ಯೋತಿ ಸ್ವಾಗತಿಸಿ, ಶ್ರೀಮತಿಮಯ್ಯ ವಂದಿಸಿದರೆ, ಶ್ರೀಮತಿ ಆಶಾ ಕೆ ಕಾರ್ಯಕ್ರಮ ನಿರೂಪಿಸಿದರು.

