ಕುಂದಾಪುರ : ವಿದ್ಯಾರ್ಥಿಗಳು ಪುಸ್ತಕ ಪ್ರೀತಿ ಬೆಳೆಸಿಕೊಳ್ಳುವ ಮುಖೇನ ಸ್ವತಂತ್ರ ಯೋಚನೆ ಹಾಗೂ ಯೋಜನೆಗಳಿಗೆ ಮುಂದಾಗ ಬೇಕು. ಆಗ ಮಾತ್ರ ತಮ್ಮದೇ ಆದ ಬದುಕು ರೂಪಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬಹುದು ಎಂದು ರೋಟರಿ ಕ್ಲಬ್ ಕುಂದಾಪುರದ ಡಿಸ್ಟಿಕ್ ಚೇರ್ಮನ್ ಆವರ್ಸೆ ಮುತ್ತಯ್ಯ ಶೆಟ್ಟಿ ಹೇಳಿದರು.
ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯಕ್ಕೆ ಕುಂದಾಪುರದ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕಿ ಡಾ| ಪಾರ್ವತಿ ಜಿ. ಐತಾಳ್