Home » ಹುಟ್ಟೂರಿನಲ್ಲಿ ಉದ್ಯಮಶೀಲತೆ-ಇನ್ನೋವೇಷನ್ ಆ್ಯಂಡ್ ಎಂಟ್ರಿಪ್ರಿನಿಯ್ಯುರ್‌ಶಿಪ್ ಡೆವಲಪ್ಮೆಂಟ್ ಸೆಲ್‌ನ ವಿನೂತನ ಪ್ರಯತ್ನ”
 

ಹುಟ್ಟೂರಿನಲ್ಲಿ ಉದ್ಯಮಶೀಲತೆ-ಇನ್ನೋವೇಷನ್ ಆ್ಯಂಡ್ ಎಂಟ್ರಿಪ್ರಿನಿಯ್ಯುರ್‌ಶಿಪ್ ಡೆವಲಪ್ಮೆಂಟ್ ಸೆಲ್‌ನ ವಿನೂತನ ಪ್ರಯತ್ನ”

by Kundapur Xpress
Spread the love

ಕುಂದಾಪುರ : ಪ್ರಸ್ತುತ ಶೈಕ್ಷಣಿಕ ಸವಾಲುಗಳನ್ನು ಎದುರಿಸುವುದರೊಂದಿಗೆ, ಪದವಿ, ಸ್ನಾತಕೋತ್ತರ ಸೇರಿದಂತೆ, ಉನ್ನತ ಶೈಕ್ಷಣಿಕ ವಿದ್ಯಾರ್ಹತೆಯನ್ನು ಹೊಂದಿದ್ದು, ಕನಿಷ್ಠ ಸಂಬಳಕ್ಕಾಗಿ ನಗರವನ್ನು ಆರಿಸಿ ಹೋಗುತ್ತಿರುವ ಯುವಜನತೆಗೆ, ಹುಟ್ಟೂರಿನಲ್ಲಿ ಉದ್ಯೋಗಾವಕಾಶದ ಜೊತೆಗೆ ಸ್ವ-ಉದ್ಯೋಗ ಹಾಗೂ ಉದ್ಯಮಶೀಲತೆಯ ಮಹತ್ವವನ್ನು ಅರಿಯುವಂತೆ ಮಾಡುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ. ಈ ನಿಟ್ಟಿನಲ್ಲಿ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಇಲ್ಲಿನ ಇನ್ನೋವೇಷನ್ ಆ್ಯಂಡ್ ಎಂಟ್ರಿಪ್ರಿನಿಯ್ಯುರ್‌ಶಿಪ್ ಡೆವಲಪ್ಮೆಂಟ್ ಸೆಲ್ ಕೈಗೊಂಡಿರುವ ಕಾರ್ಯಕ್ರಗಳು ನಿಜಕ್ಕೂ ಶ್ಲಾಘನೀಯ ಎಂದು ಕಾಮಾಕ್ಷಿ ಫಾರ್ಮಾ, ಕೆದೂರು, ತೆಕ್ಕಟ್ಟೆ ಇಲ್ಲಿನ ಯುವ ಕೃಷಿ ಉದ್ಯಮಿ ಶ್ರೀಮತಿ ದಿವ್ಯಾ ನಾಯಕ್ ಹೇಳಿದರು.
ಅವರು ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಇನ್ನೋವೇಷನ್ ಆ್ಯಂಡ್ ಎಂಟ್ರಿಪ್ರಿನಿಯ್ಯುರ್‌ಶಿಪ್ ಡೆವಲಪ್ಮೆಂಟ್ ಸೆಲ್ ಇದರ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ, ಮಾತನಾಡಿದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ವ್ಯವಹಾರಿಕ ಅಂಶಗಳನ್ನು ಪ್ರಾಯೋಗಿಕವಾಗಿ ಹೇಳಿಕೊಡುವ ನಿಟ್ಟಿನಿಂದ ಇಂತಹ ವೇದಿಕೆಗಳು ಅತಿ ಅವಶ್ಯಕ ಎಂದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ವ್ಯವಹಾರಿಕ ಪರಿಸರವನ್ನು (ಬಿಜಿನೆಸ್ ಇಕೋ ಸಿಸ್ಟಮ್) ನಿರ್ಮಿಸುವ ಉದ್ದೇಶದಿಂದ ‘ಬಿಬಿಎಚ್‌ಸಿ ಬಜಾರ್’, ಪ್ರೊಫೆಷನಲ್ ಹಾಗೂ ವೃತ್ತಿಪರ ಕೋರ್ಸ್ಗೆ ಸಂಬAಧಿಸಿದAತೆ ವಿದ್ಯಾರ್ಥಿಗಳಿಗೆ ನಿರಂತರವಾಗಿ ಆನ್‌ಲೈನ್ ಟೆಸ್ಟ್ಗಳನ್ನು ನಡೆಸುವ ಉದ್ದೇಶದಿಂದ ಪ್ರಾಧ್ಯಾಪಕರ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಿರ್ಮಿಸಿದ ಮೊಬೈಲ್ ಆಪ್ “ಲಕ್ಷ್ಯ” ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದ ಸಂಯೋಜಕರಾದ ಶರತ್ ಕುಮಾರ್ ಸ್ವಾಗತಿಸಿ, ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿ, ಸಂಯೋಜಕರಾದ ಅಕ್ಷಯ್ ಕುಮಾರ್ ಅತಿಥಿಗಳನ್ನು ಪರಿಚಯಿಸಿ, ಪ್ರಣಮ್ ಬಿ. ವಂದಿಸಿದರು. ಅಂತಿಮ ಬಿಕಾಂ. ಬಿಸಿಎ, ಬಿಬಿಎ ವಿದ್ಯಾರ್ಥಿಗಳು ಇನ್ನೋವೇಷನ್ ಆ್ಯಂಡ್ ಎಂಟ್ರಿಪ್ರಿನಿಯ್ಯುರ್‌ಶಿಪ್ ಡೆವಲಪ್ಮೆಂಟ್ ಸೆಲ್ ಇದರ ಕಾರ್ಯವೈಖರಿ ಹಾಗೂ ಮಹತ್ವವನ್ನು ವಿನೂತನವಾಗಿ ಪ್ರಸ್ತುತ ಪಡಿಸಿದರು. ವಿದ್ಯಾರ್ಥಿನಿ ಶ್ರೇಯಾ ಖಾರ್ವಿ ಪ್ರಾರ್ಥಿಸಿ, ನಾಗಶ್ರೀ ಭಟ್ ನಿರೂಪಿಸಿದರು.

 

Related Articles

error: Content is protected !!