Home » ಕಾನೂನು ಅರಿವು ಮತ್ತು ನಶಾ ಮುಕ್ತ ಭಾರತ ಮಾಹಿತಿ ಕಾರ್ಯಗಾರ
 

ಕಾನೂನು ಅರಿವು ಮತ್ತು ನಶಾ ಮುಕ್ತ ಭಾರತ ಮಾಹಿತಿ ಕಾರ್ಯಗಾರ

by Kundapur Xpress
Spread the love

ಕುಂದಾಪುರ:  ಸುಣ್ಣಾರಿಯ ಎಕ್ಸಲೆಂಟ್ ಸಮೂಹ ಸಂಸ್ಥೆಯಲ್ಲಿ “ನಶಾ ಮುಕ್ತ ಭಾರತ” ಹಾಗೂ “ಕಾನೂನು ಅರಿವು” ಕುರಿತ ಮಾಹಿತಿ ಕಾರ್ಯಗಾರವು ಸಂಸ್ಥೆಯ ಅಧ್ಯಕ್ಷರಾದ ಮಹೇಶ್ ಹೆಗ್ಡೆ ಅವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಕೋಟ ಪೊಲೀಸ್ ಠಾಣೆಯ ಕ್ರೈಂ ಬ್ರಾಂಚ್‌ನ ಪಿ.ಎಸ್.ಐ. ಮಹಾಂತೇಶ್ ಅವರು ಭಾಗವಹಿಸಿ, ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿದರು. ಮಾದಕ ವ್ಯಸನದಿಂದ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳು, ನರಮಂಡಲದ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಸ್ಥಿತಿ ಹಾಗೂ ಅದರ ಪರಿಣಾಮವಾಗಿ ವ್ಯಕ್ತಿಯ ಬದುಕು ಹೇಗೆ ಹಾಳಾಗುತ್ತದೆ ಎಂಬುದನ್ನು ವಿವರಿಸಿದರು. ಮಾದಕ ವ್ಯಸನಕ್ಕೆ ಬಲಿಯಾದ ವ್ಯಕ್ತಿ ತಪ್ಪು-ಸರಿ ಎನ್ನುವ ವಿವೇಚನೆಯನ್ನು ಕಳೆದುಕೊಂಡು ಸಮಾಜಕ್ಕೆ ಅಪಾಯಕಾರಿಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದರು.ಅದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ಅವರು ಮಾತನಾಡಿ, ಹಿಂದೆ ಮಾದಕ ವಸ್ತುಗಳು ನಗರ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತಿದ್ದರೆ, ಇಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ಸುಲಭವಾಗಿ ಲಭ್ಯವಾಗುತ್ತಿವೆ. ಮಕ್ಕಳ ಕೈಗೂ ತಲುಪುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ. ವಿದ್ಯಾರ್ಥಿಗಳು ಹಾಗೂ ಯುವಜನತೆ ಮಾದಕ ವಸ್ತುಗಳಿಂದ ದೂರವಿದ್ದು, ನಶಾ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಆಗ ಮಾತ್ರ ಭವ್ಯ ಮತ್ತು ಆರೋಗ್ಯವಂತ ಭಾರತವನ್ನು ಕಟ್ಟಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ, ಪ್ರೌಢಶಾಲೆಯ ಮುಖ್ಯಸ್ಥೆ ಸರೋಜಿನಿ ಪಿ. ಆಚಾರ್ಯ, ಸಿ.ಬಿ.ಎಸ್.ಇ. ಸಂಯೋಜಕಿ ವಿಶಾಲ ಶೆಟ್ಟಿ ಉಪಸ್ಥಿತರಿದ್ದರು.

ಹಿಂದಿ ಉಪನ್ಯಾಸಕಿ ಉಷಾ ಶೆಟ್ಟಿ ಅವರು ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಇಂಗ್ಲಿಷ್ ವಿಭಾಗದ ಮುಖ್ಯಸ್ಥ ರಸಿಕ್ ಶೆಟ್ಟಿ ಅವರು ನಿರೂಪಿಸಿ, ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.

 

Related Articles

error: Content is protected !!