36
ಹಲ್ತೂರು : ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ 2025–26 ನೇ ಸಾಲಿನ ಇನ್ಸ್ಪೈರ್ ಅವಾರ್ಡ್‌ಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಲ್ತೂರು ಕುಂದಾಪುರ ತಾಲೂಕು ಇಲ್ಲಿನ 7ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದು ಕುಮಾರಿ ಐಶ್ವರ್ಯ ಅವರು “ರೈತರಿಗೆ ಜೀವ ರಕ್ಷಕ ಉಪಕರಣ” ಎಂಬ ವಿಜ್ಞಾನ ಕಾರ್ಯನಿರ್ವಹಣಾ ಮಾದರಿಗಾಗಿ ಹಾಗೆ ಕುಮಾರಿ ಗಾನ್ಯ ಶೆಟ್ಟಿ ಅವರು “ಸ್ವಯಂ ಜಾಲ ಕವಚ ಹೊಂದಿರುವ ಸುರಕ್ಷಿತ ಒಳಚರಂಡಿ ಮ್ಯಾನ್‌ಹೋಲ್” ಎಂಬ ವಿಜ್ಞಾನ ಕಾರ್ಯನಿರ್ವಹಣಾ ಮಾದರಿಗಾಗಿ ಆಯ್ಕೆಗೊಂಡಿದ್ದಾರೆ. ಗ್ರಾಮೀಣ ಭಾಗದ ಒಂದೇ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಗೊಂಡಿರುವುದು ವಿಶೇಷ. ಮುಖ್ಯ ಶಿಕ್ಷಕಿ ಶಶಿಕಲಾ ಮತ್ತು ಸಹ ಶಿಕ್ಷಕಿ ಸುಜಾತ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ

