Home » ಗುಂಡ್ಮಿ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವಪರಿಸರ ದಿನಾಚರಣೆ
 

ಗುಂಡ್ಮಿ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವಪರಿಸರ ದಿನಾಚರಣೆ

by Kundapur Xpress
Spread the love

ಕೋಟ : ಇಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಾಂಡೇಶ್ವರ ವಲಯದ, ಸಾಸ್ತಾನ ಯಡಬೆಟ್ಟು ಕಾರ್ಯಕ್ಷೇತ್ರದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಮತ್ತು ಗಿಡ ನಾಟಿ ಕಾರ್ಯಕ್ರಮ ಬುಧವಾರ ಗುಂಡ್ಮಿ ಸರಕಾರಿ ಪ್ರೌಢಶಾಲೆ ಇಲ್ಲಿ ನಡೆಯಿತು.
ಪರಿಸರ ದಿನಾಚರಣೆ ಮತ್ತು ಗಿಡ ನಾಟಿ ಕಾರ್ಯಕ್ರಮದ ಕುರಿತು ಹಾಗೂ, ಪರಿಸರದ ಕುರಿತು ಮಕ್ಕಳಲ್ಲಿ ಹಾಗೂ ಸದಸ್ಯರಲ್ಲಿ , ಪರಿಸರದ ಮೇಲೆ ಕಾಳಜಿ ವಹಿಸಬೇಕು, ಪರಿಸರವನ್ನು ರಕ್ಷಿಸುವುದು ಎಲ್ಲರ ಹೊಣೆ, ಎಲ್ಲರೂ ಒಂದೊAದು ಗಿಡ ನಾಟಿ ಮಾಡುವುದರ ಜೊತೆಯಲ್ಲಿ ಪ್ರತಿ ವರ್ಷವೂ , ನಾಟಿ ಮಾಡಿದ ಗಿಡದ ವಾರ್ಷಿಕೋತ್ಸವ ಆಚರಿಸಿದರೆ ತುಂಬಾ ಪರಿಸರದ ಬಗ್ಗೆ ಕಾಳಜಿ ಎಂಬ ಮಾಹಿತಿಯನ್ನು ತಾಲೂಕಿನ ಕೃಷಿ ಮೇಲ್ವಿಚಾರಕರಾದ ರಾಘವೇಂದ್ರ ನೀಡಿದರು.
ಕಾರ್ಯಕ್ರಮದಲ್ಲಿ ಜನಜಾಗ್ರತೆ ಅಧ್ಯಕ್ಷ ಅಚ್ಚುತ ಪೂಜಾರಿ , ಶಾಲೆಯ ಮುಖ್ಯ ಶಿಕ್ಷಕ ಸತೀಶ್ ಐತಾಳ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಜಿ, ಶಾಲಾ ಅಭಿವೃದ್ಧಿ ಶಿಕ್ಷಣ ತಜ್ಞ ಗಣೇಶ್. ಜಿ, ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯರಾದ ಸುಲತಾ ಹೆಗ್ಡೆ, ಸಂಜೀವ ದೇವಾಡಿಗ, ಬ್ರಹ್ಮಾವರ ತಾಲೂಕಿನ ಕೃಷಿ ಅಧಿಕಾರಿ ರಾಘವೇಂದ್ರ, ಶ್ರೀ.ಕ್ಷೇ.ಧ.ಗ್ರಾ.ಯೋ ವಲಯದ ಮೇಲ್ವಿಚಾರಕಿ ಜಯಲಕ್ಷಿ÷್ಮ, ಸೇವಾ ಪ್ರತಿನಿಧಿಯವರಾದ ಶೋಭಾ,ಜ್ಯೋತಿ , ಶೌರ್ಯ ಟೀಮ್ ಸದಸ್ಯ ಕಾಳಿಂಗ ಪೂಜಾರಿ ,ಮತ್ತು ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಮತ್ತು ಶಾಲೆಯ ಶಿಕ್ಷಕ ವೃಂದದವರು, ಮತ್ತು ಮಕ್ಕಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಲಯದ ಮೇಲ್ವಿಚಾರಕ ಜಯಲಕ್ಷ್ಮೀ ನಿರೂಪಿಸಿದರು. ಸೇವಾ ಪ್ರತಿನಿಧಿ ಶೋಭಾ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಜ್ಯೋತಿ ವಂದಿಸಿದರು.

   

Related Articles

error: Content is protected !!