Home » ಗುರುಕುಲ : ಮಾತೃ ಪಿತೃ ಪೂಜನ್ ದಿವಸ್
 

ಗುರುಕುಲ : ಮಾತೃ ಪಿತೃ ಪೂಜನ್ ದಿವಸ್

by Kundapur Xpress
Spread the love

ಕೋಟೇಶ್ವರ : ಗುರುಕುಲ ಸಂಸ್ಥೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮಾತೃ ಪಿತೃ ಪೂಜನ್ ದಿವಸ್ ಎಂಬ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ. ಸತೀಶ್.ಆರ್ ,ಅಂತರಾಷ್ಟ್ರೀಯ ಮಟ್ಟದ ವ್ಯಕ್ತಿತ್ವ ವಿಕಸನ ತರಬೇತಿದಾರರು, ಮೈಸೂರು . ಇವರು ಸ್ವಸ್ಥ ಸಮಾಜದ ನಿರ್ಮಾಣವಾಗಬೇಕಾದರೆ ಅಲ್ಲಿ ಮುಖ್ಯವಾಗಿ ಕಂಡು ಬರುವುದು,ಕುಟುಂಬ ಮತ್ತು ಶಿಕ್ಷಣ ವ್ಯವಸ್ಥೆ, ಅದರಲ್ಲೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಾಮರಸ್ಯ ಹಾಗೂ ಶಿಕ್ಷಣ ಮತ್ತು ಶಿಕ್ಷಕರ ಮಹತ್ವವನ್ನು ಜೊತೆಗೆ ಇಂದು ಕುಟುಂಬ ತನ್ನ ಹೃದಯವಂತಿಕೆಯನ್ನು ಕಳೆದುಕೊಳ್ಳುತ್ತಿರುವ, ಮತ್ತು ಮಕ್ಕಳು ತಮ್ಮ ಪೋಷಕರ ಮಹತ್ವಗಳನ್ನು ಅರ್ಥ ಮಾಡಿಕೊಳ್ಳದೆ, ಎಲ್ಲರೂ ತಮ್ಮ ಸ್ವತಂತ್ರ ಬದುಕಿನ ಮೋಹದಿಂದ ಹಿರಿಯರಿಂದ ದೂರವಾದರೆ,ಮಕ್ಕಳು ಕೂಡ ಅವರ ಪ್ರೀತಿಯಿಂದ ದೂರವಾಗುತ್ತಾ ಆಧುನಿಕ ತಂತ್ರಜ್ಞಾನ ಹಿಂದೆ ಓಡುತ್ತಿರುವುದು ಮಾತ್ರ ನಿಜಕ್ಕೂವಿಪರ್ಯಾಸ. ಈ ಎಲ್ಲಾ ವಿಷಯಗಳನ್ನು ಒಟ್ಟುಗೂಡಿಸಿ ಮಕ್ಕಳ ಬದುಕಿನಲ್ಲಿ ಪೋಷಕರ ಪಾತ್ರ ಏನು ಎಂಬುದನ್ನು ಜೊತೆ ಜೊತೆಗೆ ದೇಶ ಪ್ರೇಮದ ಮಹತ್ವವನ್ನು ತಮ್ಮ ಎರಡು ದಿನದ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾಗಿ ಮನವರಿಕೆ ಮಾಡಿದರು.
ಭಾನುವಾರ ನಡೆದ ಪೋಷಕರ ಮಾರ್ಗದರ್ಶನವು ಸ್ವರ್ಗಕ್ಕೆ ಹೆಬ್ಬಾಗಿಲು ಎಂಬ ಶೀರ್ಷಿಕೆಯಡಿಯಲ್ಲಿ ನಡೆದ “ಮಾತೃ ಪಿತೃ ಪೂಜನ್ ದಿವಸ್” ದ ವಿಶೇಷವಾಗಿ ಎಲ್ಲಾ ಮಕ್ಕಳು ತಮ್ಮ ತಂದೆತಾಯಿಯ ಪಾದಪೂಜೆ ಮಾಡಿ,ಅಮ್ಮನ ಮಡಿಲಲ್ಲಿ ಮಲಗಿ,ಅಪ್ಪನ ಹೆಗಲ ಮೇಲೆ ತಾವು ಕುಳಿತು ಬೆಳೆದ ಪತ್ರಿ ಕ್ಷಣವನ್ನು ಮೆಲುಕು ಹಾಕುವಾಗ ,ಅವರ ಕಣ್ಣಂಚಿನಲ್ಲಿ ಇಳಿಯುತ್ತಿದ್ದ ನೀರಿನ ಹನಿಗಳು ಮಾತ್ರ ಸಾವಿರ ಕಥೆಗಳನ್ನು ಹೆೇಳುತ್ತಿದ್ದವು. ಪೋಷಕರ ಕಣ್ಣಿನಲ್ಲಿ ಕೂಡ ಆ ಕ್ಷಣದ ಭಾವುಕತೆ, ಇಂತಹ ಮಕ್ಕಳನ್ನು ಪಡೆದ ನಾವೇ ಧನ್ಯರು ಎಂಬ ಸಾರ್ಥಕತೆ ಎದ್ದು ಕಾಣುತ್ತಿತ್ತು. ಒಟ್ಟಿನಲ್ಲಿ ಈ ಕಾರ್ಯಕ್ರಮ ಮಾತ್ರ ಪೋಷಕರು ಮತ್ತು ಮಕ್ಕಳ ನಡುವೆ ಹೊಸದೊಂದು ಬಾಂಧವ್ಯದ ಕೊಂಡಿಯನ್ನು ಬೆಸೆದಿರುವುದು ಮಾತ್ರ ಅಕ್ಷರಶಃ ಸತ್ಯ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಾಂಡ್ಯ ಎಜುಕೇಶನಲ್ ಟ್ರಸ್ಟನ ಜಂಟಿ ಕಾರ್ಯನಿರ್ವಾಹಕಿ ಶ್ರೀಮತಿ ಅನುಪಮಾ .ಎಸ್.ಶೆಟ್ಟಿ ಮಾತನಾಡಿ. ಪ್ರತಿ ಧರ್ಮವು ತಂದೆ ತಾಯಿಯರ ಮಹತ್ವವನ್ನು ನಮಗೆಲ್ಲ ತಿಳಿಸುತ್ತಾ ಬಂದಿದೆ, ಅಲ್ಲದೆ ಅದರ ಉಳಿವಿಗಾಗಿ ಇಂತಹ ಆಚರಣೆಗಳು ತುಂಬಾ ಮುಖ್ಯ, ನಾವು ನಮ್ಮ ತಂದೆ ತಾಯಿಯರ ಮಾರ್ಗದರ್ಶನದಂತೆ ಬೆಳೆದು ಬಂದವರು. ಇಂದು ನಮ್ಮ ಕೆಲಸದ ಒತ್ತಡದ ನಡುವೆ ಎಲ್ಲಾ ವಿಚಾರಗಳನ್ನು ಮರೆಯುತ್ತಿದ್ದೇವೆ ಅದರಲ್ಲೂ ಪೋಷಕರ ಪಾದಪೂಜೆ/ ನಮಸ್ಕಾರ ಮಾಡುವ ಸಂಪ್ರದಾಯ ನಮಗೆ ತಲೆಮಾರಿನಿಂದ ಬಳುವಳಿಯಾಗಿ ಬಂದಿರುವ ವಿಷಯ,ಇದರ ಮಹತ್ವವನ್ನುಈ ಹಂತದಲ್ಲಿ ಮಕ್ಕಳಿಗೆ ತಿಳಿಸುವ ಕೆಲಸವನ್ನು ನಾವೆಲ್ಲರೂ ಜೊತೆ ಸೇರಿ ಮಾಡಬೇಕಿದೆ ಎಂದು ತಿಳಿಸಿದರು.
ಶಾಲಾ ಪ್ರಾಂಶುಪಾಲರಾದ ಶ್ರೀಮತಿ. ರೂಪ ಶೆಣೈ, ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಕಾರ್ಯಕ್ರಮದ ಹಿಂದಿನ ಉದ್ದೇಶವನ್ನು ಪೋಷಕರಿಗೆ ವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕ ಶ್ರೀ.ಸುಭಾಶ್ಚಂದ್ರ ಶೆಟ್ಟಿ , ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹಶಿಕ್ಷಕಿ ಅಶ್ವಿನಿ ನಿರೂಪಿಸಿ,ವಂದಿಸಿದರು.

 

Related Articles

error: Content is protected !!