Home » ಪರ್ವೋತ್ಸವದಲ್ಲಿ ಸಾಧನ ಸಂಭ್ರಮ: ಶ್ರೀ ಅನಂತ ನಾಯಕ್
 

ಪರ್ವೋತ್ಸವದಲ್ಲಿ ಸಾಧನ ಸಂಭ್ರಮ: ಶ್ರೀ ಅನಂತ ನಾಯಕ್

by Kundapur Xpress
Spread the love

ತೆಕ್ಕಟ್ಟೆ :ಸೋಮವಾರ ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾಗಿರಿ, ತೆಕ್ಕಟ್ಟೆ ಇಲ್ಲಿ ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಶ್ರೀ ಅನಂತ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿ ಜೀವನದ ಅವಿಸ್ಮರಣೀಯ ಸಂಭ್ರಮದ ಕ್ಷಣ, ನೆನಪಿನ ಬುತ್ತಿಯಲ್ಲಿ ಉಳಿದು ಜೀವನದ ಅತ್ಯುತ್ತಮ ಸಾಧನೆಗೆ ಪೂರಕವಾಗುವ, ಪ್ರಚೋದನೆಗೆ ಒಳಗಾಗುವ ಮೂಲಕ ಸಾಧಕನಾಗಲು ಸ್ಪೂರ್ತಿ ತುಂಬುವ ಕಾರ್ಯಕ್ರಮವೆಂದರು.
ಮುಖ್ಯ ಅತಿಥಿಗಳಾಗಿ ಶ್ರೀ ಭಾರತೀಶ ಉಪಾಧ್ಯ ಸಿ ಎ ಕೋಟೇಶ್ವರ ಶ್ರೀ ಅರುಣ್ ಕುಮಾರ್ ಶೆಟ್ಟಿ ಮಾಲಕರು ಸಿದ್ಧಿ ವಿನಾಯಕ ಕ್ಯಾಶ್ಯೂ ತೆಕ್ಕಟ್ಟೆ ಹಾಗೂ ಮಲ್ಯಾಡಿ ಶ್ರೀ ಸುಧೀರ್ ಕುಮಾರ್ ಶೆಟ್ಟಿ ಅಧ್ಯಕ್ಷರು ರೋಟರಿ ಕ್ಲಬ್ ತೆಕ್ಕಟ್ಟೆ ಇವರು ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದು, ಮುಖ್ಯೋಪಾಧ್ಯಾಯರಾದ ಶ್ರೀ ಹರ್ಷ ಕೋಟೇಶ್ವರ ಸ್ವಾಗತಿಸಿ, ಶ್ರೀಮತಿ ಜಯಲಕ್ಷ್ಮಿ ವಂದಿಸಿದರೆ, ಶ್ರೀಮತಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.

 

Related Articles

error: Content is protected !!