Home » ಜನತಾ ಆವಿಷ್ಕಾರ್‌ 2K24 ಕಾರ್ಯಕ್ರಮ
 

ಜನತಾ ಆವಿಷ್ಕಾರ್‌ 2K24 ಕಾರ್ಯಕ್ರಮ

ವಿಜ್ಞಾನ, ವ್ಯವಹಾರ ಮೇಳ

by Kundapur Xpress
Spread the love

ಹೆಮ್ಮಾಡಿ : ಜಗತ್ತು ವ್ಯಾವಹಾರಿಕವಾಗಿ ಮುನ್ನಡೆಯುತ್ತಿದ್ದು ವಿದ್ಯಾರ್ಥಿಗಳು ವ್ಯವಹಾರ ಜ್ಞಾನ ಹೊಂದುವುದು  ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಜನತಾ ಅವಿಷ್ಕಾರ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಬೌದ್ದಿಕ ಶಕ್ತಿ ಹೆಚ್ಚಿಸಿಕೊಳ್ಳಲು  ಸಹಕಾರಿಯಾಗಿದೆ ಎಂದು ಖ್ಯಾತ ಮುಳುಗು ತಜ್ಞ ಈಶ್ವರ ಮಲ್ಪೆ ಹೇಳಿದರು.

ಕುಂದಾಪುರ ತಾಲೂಕಿನ  ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಆವಿಷ್ಕಾರ್‌ 2K24 ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ವಿಜ್ಞಾನ, ವ್ಯವಹಾರ ಮೇಳ, ಸಾಂಸ್ಕೃತಿಕ ಸಂಗಮ ಕಾರ್ಯಕ್ರಮವನ್ನು ಉದ್ಘಾಟಸಿ ಈಶ್ವರ ಮಲ್ಪೆ ಮಾತನಾಡಿದರು

ಸಮಾರಂಭದ  ಅಧ್ಯಕ್ಷತೆ ವಹಿಸಿದ ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಇದರ ಆಡಳಿತ ಮಂಡಳಿಯ ಅಧ್ಯಕ್ಷರಾದ  ಗಣೇಶ್ ಮೊಗವೀರ ಮಾತನಾಡಿ ಸ್ಪರ್ಧಾತ್ಮಕ ಯುಗಕ್ಕೆ ಸರಿ ಹೊಂದುವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಲಾಗುತ್ತಿದ್ದು, ಪಠ್ಯದ ಜತೆಗೆ ಪತ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಮನ್ನಣೆಯನ್ನು ನೀಡುತ್ತಾ ಬರಲಾಗುತ್ತಿದೆ ವಹಿ ವಾಟು ವ್ಯಾಪಾರ ಜ್ಞಾನ ಹಾಗೂ ಬುದ್ದಿವಂತಿಕೆ ಹೆಚ್ಚಿಸುವಲ್ಲಿ ಕಾರ್ಯಕ್ರಮ ಪೂರಕವಾಗಿದೆ ಎಂದು ಹೇಳಿದರು

ವಿಜ್ಞಾನ ಮೇಳವನ್ನು ಚೆನ್ನಯ್ಯ.ಯು ಹಾಗೂ ಜನತಾ ಚಿತ್ರ ಸಿರಿಯನ್ನು ಚಿತ್ರ ಕಲಾ ಶಿಕ್ಷಕ ರಾಜೇಶ್ ತಾಳಿಕೋಟೆ ಉದ್ಘಾಟಿಸಿ ದರು. ಡ್ರಾಮಾ ಸೀಸನ್ 2 ವಿನ್ನರ್ ಸಮೃದ್ಧಿ ಮೊಗವೀರ ಸಾಂಸ್ಕೃತಿಕ ಮೇಳವನ್ನು ಉದ್ಘಾ ಟಿಸಿದರು. ಕೊಲ್ಲೂರು ದೇವಳದ ಧರ್ಮದರ್ಶಿ ಬಾಬು ಹೆಗ್ಡೆ ಗುರೂಜಿ ರಾಜಾರಾಮ ಯಡಮೊಗೆ, ಶೈಕ್ಷಣಿಕ ಸಲಹೆಗಾರರಾದ ಚಿತ್ರಾ ಕಾರಂತ, ಜನತಾ ಹೈಸ್ಕೂಲ್ ಹೆಮ್ಮಾಡಿ ಮುಖ್ಯ ಶಿಕ್ಷಕ ಮಂಜು ಕಾಳವಾರ, ಜನತಾ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ರಮೇಶ್ ಪೂಜಾರಿ,ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಿರಿ ಮಂಜೇಶ್ವರ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ, ಕಾಲೇಜಿನ ಬೋಧಕ, ಬೋಧ ಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪೋಷ ಕರು ಉಪಸ್ಥಿತರಿದ್ದರು. ಪ್ರಿನ್ಸಿಪಾಲ್ ಗಣೇಶ್ ಮೊಗವೀರ ಸ್ವಾಗತಿಸಿದರು.ಉಪನ್ಯಾಸಕ ಉದಯ್ ನಾಯ್ಕ ಕಾರ್ಯಕ್ರಮ ನಿರೂಪಿಸಿ ಉಪನ್ಯಾಸಕ ಹರ್ಷ ವಂದಿಸಿದರು

ಜನತಾ ಆವಿಷ್ಕಾರ ಕಾರ್ಯಕ್ರಮದಲ್ಲಿ 50ಕ್ಕೂ ಅಧಿಕ ಸ್ಟಾಲ್‌ಗಳಲ್ಲಿ ವಿದ್ಯಾರ್ಥಿಗಳು ನಾನಾ ಬಗೆಯ ಮಳಿಗೆಗಳನ್ನು ತೆರೆದು ವಹಿವಾಟು ನಡೆಸಿದರು. ವಿಜ್ಞಾನ ಮೇಳ ನೋಡುಗರ ಮನ ಸೆಳೆಯಿತು. 

 

Related Articles

error: Content is protected !!