Home » ದ್ವಿತೀಯ ಅಂತಾರಾಷ್ಟ್ರೀಯ ಸಮ್ಮೇಳನ
 

ದ್ವಿತೀಯ ಅಂತಾರಾಷ್ಟ್ರೀಯ ಸಮ್ಮೇಳನ

ಎಂ ಐ ಟಿ ಯ ರಿಸರ್ಚ್ ಸೆಲ್ ವತಿಯಿಂದ ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ಹಾಗೂ ಡೇಟಾ ಸೈನ್ಸ್

by Kundapur Xpress
Spread the love

ಕುಂದಾಪುರ : ಎಂ ಐ ಟಿ ಯ ರಿಸರ್ಚ್ ಸೆಲ್ ವತಿಯಿಂದ ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ಹಾಗೂ ಡೇಟಾ ಸೈನ್ಸ್ ಕುರಿತ ದ್ವಿತೀಯ ಅಂತಾರಾಷ್ಟ್ರೀಯ ಸಮ್ಮೇಳನ ಎರಡು ದಿನಗಳ ಕಾಲ ನಡೆಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮಣಿಪಾಲ ಎಂಎಡಿಸಿ ಚೇರ್ಮನ್ರಾದ ಡಾ. ಬ್ರಿಗೇಡಿಯರ್ ಸುರಜಿತ್ ಸಿಂಗ್ ಪಾಬ್ಲಾ ಅವರು ದೀಪಬೆಳಗಿಸುವುದರ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದರು. ಆರಂಭಿಕ ಕೀ-ನೋಟ್ ಭಾಷಣ ಮಾಡಿದ ಅವರು, ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ (ಎ ಬಿ ಸಿ) ಮತ್ತು ಮಾನವ-ಕೇಂದ್ರಿತ ಎ ಐ ಕುರಿತು ಬೆಳಕು ಚೆಲ್ಲಿದರು. ಅತ್ಯುತ್ತಮ ವಿಷಯದ ಬಗ್ಗೆ ಎಂ ಐ ಟಿ ಕೆ ಯಲ್ಲಿ ಸಮ್ಮೇಳನ ನಡೆಸುತ್ತಿರುವುದಕ್ಕೆ ತಮ್ಮ ಅತೀವ ಸಂತಸ ವ್ಯಕ್ತಪಡಿಸಿದರು ಶ್ರೀಮತಿ ಡಾ. ಚರನ್ಜಿತ್ ಕೌರ್ ಪಾಬ್ಲಾ ಅವರು ಕೂಡ ಸಮ್ಮೇಳನಕ್ಕೆ ಶುಭಾಶಯ ಕೋರಿದರು. ಅಧ್ಯಕ್ಷೀಯ ಭಾಷಣವನ್ನು ಮಾಡಿದ ಪ್ರಾಂಶುಪಾಲರಾದ ಡಾ . ರಾಮಕೃಷ್ಣ ಹೆಗಡೆ ಯವರು ಮಾತನಾಡಿ , ಎ ಐ ಅಂತಹ ತಂತ್ರಜ್ಞಾನಯನ್ನು ಧನಾತ್ಮಕವಾಗಿ ಬಳಸಿಕೊಂಡರೆ ಸಕಲ‌ ಜೀವಿಗಳಿಗೆ ದಾರಿದೀಪವಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಇದನ್ನು ಕಲಿತು , ಸದುಪಯೋಗ ಪಡೆದುಕೊಳ್ಳಬೇಕೇಂದು ಒತ್ತಿ ಹೇಳಿದರು.
ಡಾ. ಮೆಲ್ವಿನ್ ಡಿ’ಸೋಜಾ, (ಉಪಪ್ರಾಂಶುಪಾಲರು) ಮಾತನಾಡಿ ಎಂ ಐ ಟಿ ಕೆ ವಿದ್ಯಾರ್ಥಿಗಳು ಕೂಡ ಸಮ್ಮೇಳನದಲ್ಲಿ ಉತ್ತಮ ಸಂಶೋಧನ ಪ್ರಬಂಧ ಮಂಡಿಸುತ್ತಿವುದು ಗಮನಾರ್ಹ ವಿಷಯ ಎಂದು ಹೇಳಿದರು. ಪ್ರಾರ್ಥನೆ ಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಸಮ್ಮೇಳನ ಸಂಯೋಜಕ ಡಾ. ಇಂದ್ರ ವಿಜಯ್ ಸಿಂಗ್ (ಡೀನ್, ಸಂಶೋಧನಾ ವಿಭಾಗ ಎಂ ಐ ಟಿ ಕೆ) ಪ್ರಾಸ್ತಾವಿಕ ಭಾಷಣ ಮಾಡಿದರು ಮತ್ತು ಸಮ್ಮೇಳನದ ಧ್ಯೇಯೋದ್ದೇಶ ಗಳನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಡಾ. ಸತ್ಯಜಿತ್ (ಡೈರೆಕ್ಟರ್, ಐ ಎಂ ಜೆ ರಿಸರ್ಚ್ ಇನ್‌ಸ್ಟಿಟ್ಯೂಟ್), ವಿವಿಧ ಡೀನ್‌ಗಳು, ವಿಭಾಗ ಮುಖ್ಯಸ್ಥರು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಆಹ್ವಾನಿತ ಪ್ರತಿನಿಧಿಗಳು, ಬೋಧಕ ವೃಂದ, ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹಾಜರಿದ್ದು ಪ್ರತ್ಯಕ್ಷ ಹಾಗೂ ವರ್ಚುವಲ್ ಆಗಿ ತಮ್ಮ ಪ್ರಬಂಧ ಮಂಡಿಸಿದರು.
ಈ ಸಮ್ಮೇಳನವು ಜ್ಞಾನ ವಿನಿಮಯ, ಇತ್ತೀಚಿನ ಸಂಶೋಧನೆಗಳ ಕುರಿತು ಚರ್ಚೆಗಳಿಗೆ ಒಂದು ಅಮೂಲ್ಯ ವೇದಿಕೆಯಾಯಿತು. ಶಿಕ್ಷಣ ಮತ್ತು ಉದ್ಯಮ ತಜ್ಞರ ಸಕ್ರೀಯ ಪಾಲ್ಗೊಳ್ಳುವಿಕೆಯಿಂದ ಈ ಸಮ್ಮೇಳನವು ಭವ್ಯ ಯಶಸ್ಸು ಕಂಡಿತು. ನಿಖಿತಾ ಅವರು ಸ್ವಾಗತಿಸಿದರು ಪ್ರೊ. ಲಕ್ಷ್ಮಿ ಮುಖ್ಯಅತಿಥಿಗಳನ್ನು ಪರಿಚಯಿಸಿದರು ಅನುಷಾ ಧನ್ಯವಾದಗೈದರು

 

Related Articles

error: Content is protected !!