ಕುಂದಾಪುರ : ಪಿಯುಸಿ ವಿದ್ಯಾರ್ಥಿಗಳ ಶಿಕ್ಷಣ ಮಾಹಿತಿ ಕಾರ್ಯಗಾರವು ಇಂದು ಶನಿವಾರ ಮಧ್ಯಾಹ್ನ 2.00 ರಿಂದ ಸಂಜೆ 4:30 ರವರೆಗೆ ಕುಂದಾಪುರದ ಚಿಕ್ಕನಸಾಲ್ ರಸ್ತೆಯಲ್ಲಿರುವ ಮೋಗವೀರ ಭವನದಲ್ಲಿ ನಡೆಯಲಿದೆ
ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ನಾರಾಯಣ ಕಾರ್ಯಕಟ್ಟೆ ಸಿ ಏ ವೀನಿತ್ ಶೆಟ್ಟಿ ಫ್ರೋಫೆಸರ್ ನಾರಾಯಣ ರಾವ್ ಹಾಗೂ ಎಂ.ಮಂಜುನಾಥ್ ಪಾಲ್ಗೊಂಡು ಮಾರ್ಗದರ್ಶನ ಮಾಡಲಿದ್ದಾರೆ
ಕುಂದಾಪುರದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ಬೆಳೆಸುವಲ್ಲಿ ಕೊಡುಗೆ ನೀಡುವ ಸಾಮಾಜಿಕ ಕಳಕಳಿಯ ಸಲುವಾಗಿ KundapurXpress ಈ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ “PUC CROSSROADS” ಎಂಬ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಪಿಯುಸಿ ಬಳಿಕದ ಶಿಕ್ಷಣದ ಆಯ್ಕೆಗಳು ಎನ್ನುವ ಉಚಿತ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ
ಪಿಯುಸಿ ಪರೀಕ್ಷೆಗೆ ತಯಾರಾಗುವುದು ಹೇಗೆ ಸಮಯ ನಿರ್ವಹಣಾ ಕೌಶಲ್ಯ ವಿಷಯವಾರು ಅಧ್ಯಯನ ತಂತ್ರ ಪಿಯುಸಿ ನಂತರ ಮುಂದೇನು ವಿಷಯದ ಬಗ್ಗೆ ನುರಿತ ಶಿಕ್ಷಣ ತಜ್ಞರೊಂದಿಗೆ ಸಂವಾದ ಎನ್ನುವ ವಿಷಯದ ಕುರಿತು ಮಾರ್ಗದರ್ಶನ ನೀಡಲಿದ್ದಾರೆ ಜೊತೆಗೆ ಪಿಯುಸಿ ನಂತರ ಇರುವ ಶೈಕ್ಷಣಿಕ ಅವಕಾಶಗಳನ್ನು ಹೊಂದಿರುವ ಸಮಗ್ರ ಕೈಪಿಡಿಯನ್ನು ನೀಡುತ್ತಿದ್ದಾರೆ ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘಟಕರು ವಿನಂತಿಸಿದ್ದಾರೆ