ತೆಕ್ಕಟ್ಟೆ : ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ಶಿಕ್ಷಕರಿಗೆ ಆಯೋಜಿಸಿದ ಹ್ಯಾಪಿ ಲರ್ನಿಂಗ್ , ತರಗತಿ ಸಂವಹನ ಕಾರ್ಯಗಾರದಲ್ಲಿ ನಿಮಗೆ ಮೂರು ರೀತಿಯಲ್ಲಿ ತರಬೇತಿ ನೀಡುವುದಕ್ಕೆ ನಾನು ಸಮರ್ಥನಾಗಿದ್ದೇನೆ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯಿಂದ ಬಂದವನಾದ ನಾನು ನನ್ನ ಈ ವ್ಯಕ್ತಿತ್ವವನ್ನ ಬೆಳೆಸಿರುವುದೇ ರಾಷ್ಟ್ರೀಯ ಸ್ವಯಂಸೇವಕ ಸಂಘ . ನಾನು ನಿತ್ಯ ಶಾಖೆಗೆ ಹೋಗುತ್ತಿದ್ದೆ .ಬಾಲ್ಯದಿಂದಲೂ ಸಂಘದ ಒಡನಾಟ ಇರುವುದರಿಂದ ನನ್ನ ವ್ಯಕ್ತಿತ್ವದಲ್ಲಿ ಬದಲಾವಣೆ ಆಗೋದಕ್ಕೆ ಸಾಧ್ಯವಾಯಿತು. ಇವತ್ತಿನ ರಾಜೇಂದ್ರ ಭಟ್ ಆಗಿರುವುದಕ್ಕೆ ಮುಖ್ಯ ಕಾರಣ ಸಂಘದ ಸಂಪರ್ಕ. ಇವತ್ತು ಜ್ಞಾನವನ್ನು ಪಡೆದಿರುವುದು ಮತ್ತು ಜ್ಞಾನವನ್ನು ಹಂಚಲು ಮುಖ್ಯ ಕಾರಣ ಮತ್ತು ಪ್ರೇರಣೆ ರಾಷ್ಟೀಯ ಸ್ವಯಂಸೇವಕ ಸಂಘ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಕಾರ್ಕಳದ ಶ್ರೀ ರಾಜೇಂದ್ರ ಭಟ್ ಕಾರ್ಯಾಗಾರದ ಆಶಯ ನುಡಿಯಲ್ಲಿ ಮಾತನಾಡಿದರು
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ಒಟ್ಟು 115 ಶಿಕ್ಷಕರು ಕಾರ್ಯಗಾರದಲ್ಲಿ ಭಾಗವಹಿಸಿದರು. ಸಂಪನ್ಮೂಲ ವ್ಯಕ್ತಿ ಶ್ರೀಯುತ ರಾಜೇಂದ್ರ ಭಟ್ ಕಾರ್ಕಳ ಇವರು ಮೂರು ಅವಧಿ ಗಳಲ್ಲಿ ತರಗತಿ ಸಂವಹನ ಸಂಬಂಧಿಸಿದ ವಿಚಾರಗಳನ್ನು ಚಟುವಟಿಕೆ ಆಧಾರಿತ ರೂಪದಲ್ಲಿ ತರಬೇತಿಯನ್ನು ನೀಡಿದರು.
ಕಾರ್ಯಗಾರದಲ್ಲಿ ಪ್ರಾಸ್ತಾವಿಕ ನುಡಿಯನ್ನು ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ ಗೌರವ ಕಾರ್ಯದರ್ಶಿ ಶ್ರೀಯುತ ಸಂಜೀವ್ ಗುಂಡ್ಮಿ ಯವರು ಮಾಡಿದರು.ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆಯ ಮಾತಾಜಿ ಶ್ರೀಮತಿ ಸಂಧ್ಯಾ ಭಟ್ ವಂದಿಸಿದರು .
ಕಾರ್ಯಕ್ರಮ ನಿರೂಪಣೆ ಶ್ರೀಮತಿ ಶಕೀಲಾ ಮಾತಾಜಿ ನಿರ್ವಹಿಸಿದರು