ಮೂಡ್ಲಕಟ್ಟೆ : ವಿಶ್ವ ಪರಿಸರ ದಿನದಂದು ವಿದ್ಯಾ ಅಕಾಡೆಮಿಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. ಇದೇ ದಿನ ವಿಶೇಷವಾಗಿ ಪೂರ್ವ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಶಾಲೆಯ ಮೊದಲ ದಿನವಾಗಿತ್ತು. ಶಾಲೆಯ ಆವರಣ ಹಸಿರು ಹಬ್ಬದಂತೆ ಕಂಗೊಳಿಸುತ್ತಿದ್ದರೆ ಮಕ್ಕಳ ಮುಖಗಳಲ್ಲಿ ಕುತೂಹಲ, ಅಚ್ಚರಿ ,ಅಳುವಿನ ಭಾವನೆಗಳಿದ್ದವು.
ಶಿಕ್ಷಕಿಯರು ಶಾಲೆಯ ಪ್ರವೇಶ ದ್ವಾರದಲ್ಲಿ ಸ್ವಾಗತ ಫಲಕಗಳೊಂದಿಗೆ ಮಕ್ಕಳನ್ನ ಆತ್ಮೀಯವಾಗಿ ಬರಮಾಡಿಕೊಂಡರು. ಕೆಲ ಮಕ್ಕಳು ಉತ್ಸಾಹದಿಂದ ನಗುತ್ತಾ ಬಂದರೆ ಕೆಲ ಮಕ್ಕಳು ತಾಯಿಯ ಕೈಬಿಟ್ಟಿದ್ದಕ್ಕೆ ಅಳಲಾರಂಭಿಸಿದರು. ಆ ಭಾವನೆ ತುಂಬಿದ ಕ್ಷಣಗಳಲ್ಲಿ ಶಿಕ್ಷಕರ, ಸಾಂತ್ವಾನ ಪೋಷಕರ ಧೈರ್ಯ ನೀಡುವ ಮಾತುಗಳು ಸಹಾಯಕವಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ಅನುಷಾ ಎಸ್ ರಾವ್ ಅವರು ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಪುಟಾಣಿಗಳು ಪರಿಸರ ದಿನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಮಕ್ಕಳಿಗೆ ಕೇವಲ ಶಾಲೆಯ ಆರಂಭವಲ್ಲ ಭಾವನೆಗಳಿಂದ ಕೂಡಿದ ಪರಿಸರದ ಪ್ರೇಮ ಬಿತ್ತುವ ಹಾಗೂ ಜೀವನ ಪ್ರಮುಖ ಹಂತದ ಶುಭಾರಂಭವಾಗಿತ್ತು.

